ಗೋಣಿಕೊಪ್ಪ ವರದಿ, ಜೂ. 22: ತಿತಿಮತಿ ಗ್ರಾಮದ ಮರಪಾಲ, ಚೀನಿಹಡ್ಲು ಅಂಗನವಾಡಿ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಸ್ಥೆ ಹಾಗೂ ತಿತಿಮತಿ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಯಿತು.

ತಿತಿಮತಿ ಆರೋಗ್ಯ ಕೇಂದ್ರದ ಮುಖ್ಯ ವೈದ್ಯ ಡಾ. ಹೊಸಮನಿ ಫಲಾನುಭವಿಗಳಿಗೆ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ, ಮಗು ಹಾಗೂ ತಾಯಿಯ ಆರೋಗ್ಯ ರಕ್ಷಣೆಗೆ ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಿದರು.

ಈ ಸಂದರ್ಭ ಬಿಇಹೆಚ್‍ಒ ಶಿವಯ್ಯ, ಆರೋಗ್ಯ ಸಹಾಯಕಿಯರ ಮೇಲ್ವಿಚಾರಕಿ ದೀಪಾ ಮತ್ತು ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂತಾನೋತ್ಪತ್ತಿ ಹಾಗೂ ಮಗುವಿನ ಆರೋಗ್ಯ ಯೋಜನೆಯ ಮುಖ್ಯಸ್ಥ ವಾಗೀಶ್, ವೀರಾಜಪೇಟೆ ಘಟಕದ ಮೇಲ್ವಿಚಾರಕರುಗಳಾದ ಲೋಕೇಶ್ ಹಾಗೂ ಸೆಲಿನಾ ಡಿಸೋಜ ಇದ್ದರು.