ನಾಪೆÉÇೀಕ್ಲು, ಜೂ. 22: ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದ ಮೇದರ ವಾಸು ಅಕಾಲಿಕ ಮರಣ ಹೊಂದಿದ ಕಾರಣ ತೆರವಾಗಿದ್ದ ಸ್ಥಾನಕ್ಕೆ ಬೇತು ಗ್ರಾಮದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎನ್.ಎ. ಕೃಷ್ಣಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಆಯ್ಕೆ ನಡೆಯಿತು. ಬ್ಯಾಂಕ್ನ ಅಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಸಂಘದ ಉಪಾಧ್ಯಕ್ಷೆ ಕೇಲೇಟಿರ ಮಾಲಾ ಬೋಪಯ್ಯ, ಸದಸ್ಯರಾದ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಅರೆಯಡ ಅಶೋಕ, ಎನ್.ಎಸ್. ಉದಯ ಶಂಕರ್, ಚೋಕಿರ ಪ್ರಭು ಪೂವಪ್ಪ, ಚೀಯಕಪೂವಂಡ ಸತೀಶ್ ದೇವಯ್ಯ, ಬಿ.ಜೆ.ಪಿ. ವಲಯಾಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಇದ್ದರು.