ಗೋಣಿಕೊಪ್ಪ ವರದಿ, ಜೂ. 22: ತಾ. 24 ರಂದು (ನಾಳೆ) ಗೋಣಿಕೊಪ್ಪಲು ರೋಟರಿ ಕ್ಲಬ್ ನೂತನ ಸಮಿತಿ ಸದಸ್ಯರುಗಳ ಪದಗ್ರಹಣ ಕಾರ್ಯಕ್ರಮ ಗೋಣಿಕೊಪ್ಪಲು ಪರಿಮಳ ಮಂಗಳ ವಿಹಾರ ಸಭಾಂಗಣದಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ ಎಂದು ಕ್ಲಬ್ ನಿಯೋಜಿತ ಅಧ್ಯಕ್ಷ ಕಾಡ್ಯಮಾಡ ನವೀನ್ ತಿಳಿಸಿದ್ದಾರೆ.
ಪದಗ್ರಹಣ ಅಧಿಕಾರಿಯಾಗಿ ರೋಟರಿ ನಿಕಟಪೂರ್ವ ಗವರ್ನರ್ ಎಂ.ಎ. ಸುರೇಶ್ ಚಂಗಪ್ಪ ಪಾಲ್ಗೊಳ್ಳಲಿದ್ದಾರೆ. ಸಹಾಯಕ ಗವರ್ನರ್ ಧರ್ಮಪುರಿ ನಾರಾಯಣ್, ಪಿ. ನಾಗೇಶ್, ವಲಯದ ಬಿ.ಎ. ದೇಚಮ್ಮ, ಡಾ. ಎಸ್. ವಿ. ನರಸಿಂಹನ್, ನಿರ್ಗಮಿತ ಅಧ್ಯಕ್ಷ ದಿಲನ್ ಚೆಂಗಪ್ಪ, ಕಾರ್ಯದರ್ಶಿ ಬೀಟಾ ಲಕ್ಷ್ಮಣ್ ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯ ಯೋಜನೆ ಯಂತೆ ಮೈರೋಟರಿ ಸದಸ್ಯತ್ವ ಅಭಿಯಾನ, ಆರೋಗ್ಯ, ದಂತ, ಕಣ್ಣಿನ ಪರೀಕ್ಷೆ ಶಿಬಿರ ನಡೆಸುವ ಯೋಜನೆಗಳನ್ನು ಹಮ್ಮಿಕೊ¼ À್ಳಲಾಗುವದು. ವಿಶೇಷ ಸಾರ್ವಜನಿಕ ಕಾರ್ಯಕ್ರಮ ನಡೆಸಲಾಗುವದು ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ನಿಯೋಜಿತ ರೋಟರಿ ಸೇವಾ ನಿರ್ದೇಶಕ ಡಾ. ಕೆ.ಎನ್. ಚಂದ್ರಶೇಖರ್, ಯೋಜನಾ ಘಟಕ ನಿರ್ದೇಶಕ ಪಿ.ಬಿ. ಪೂಣಚ್ಚ, ಜಂಟಿ ಕಾರ್ಯದರ್ಶಿ ಸುಮಿ ಸುಬ್ಬಯ್ಯ ಉಪಸ್ಥಿತರಿದ್ದರು.