ಮಡಿಕೇರಿ, ಜೂ. 21: ಮಡಿಕೇರಿಯ ವಿದ್ಯಾಭವನ ಕೊಡಗು ವಿದ್ಯಾಲಯ ಹಾಗೂ ಕೊಡಗು ವಿದ್ಯಾಲಯ ಆಪಚ್ರ್ಯುನಿಟಿ ಶಾಲೆ, ಅರಣ್ಯ ಇಲಾಖೆಯ ಸಂಯುಕ್ತಾ ಶ್ರಯದಲ್ಲಿ ಶಾಲಾ ಆವರಣದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕಡಗದಾಳು ಸರಕಾರಿ ಪ್ರಾಥಮಿಕ ಶಾಲೆ, ಮಡಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಡಿಕೇರಿಯ ರಾಜರಾಜೇಶ್ವರಿ ಶಾಲೆ ಮತ್ತು ಗಾಳಿಬೀಡಿನ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು 500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಅರಣ್ಯ ಇಲಾಖೆಯ ವತಿಯಿಂದ ವಿತರಿಸಲಾದ ಹೊಂಗೆ , ತಾರಿ , ಹಲಸು , ಹೆಬ್ಬಲಸು , ಹೆಬ್ಬೇವು ಮುಂತಾದ 2000 ಬೀಜಗಳಿಂದ ಕೂಡಿರುವ ಮಣ್ಣಿನ ಉಂಡೆಗಳನ್ನು ವಿದ್ಯಾರ್ಥಿಗಳು ತಯಾರಿಸಿದರು. ಹಲವು ಜಾತಿಯ ಗಿಡಗಳನ್ನು ಈ ಸಂದರ್ಭದಲ್ಲಿ ನೆಡಲಾಯಿತು.

ಕಾರ್ಯಕ್ರಮದಲ್ಲಿ ಆಪಚ್ರ್ಯುನಿಟಿ ಶಾಲೆಯ ನಿರ್ದೇಶಕಿ ಮೀನಾ ಕಾರ್ಯಪ್ಪ , ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾಹರೀಶ್ , ಉಪಪ್ರಾಂಶುಪಾಲೆ ಕೆ.ವನಿತಾ ಚಂಗಪ್ಪ , ವ್ಯವಸ್ಥಾಪಕ ರವಿ, ವಲಯ ಅರಣ್ಯಾಧಿಕಾರಿ ಗಳಾದ ಆನಂದ್, ಮಲ್ಲಯ್ಯ, ಬಾಬುರಾಢೋಡ್ ಮತ್ತು ಅಪರ ವಲಯ ಅರಣ್ಯಾಧಿಕಾರಿ ಜಗದೀಶ್, ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.