ಮಡಿಕೇರಿ, ಜೂ. 21: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2018ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ, ಕಲಾವಿದರು, ಲೇಖಕರು, ಪ್ರಕಾಶಕರಿಗೆ ಕನ್ನಡ ಪುಸ್ತಕ ಸೊಗಸು-2018 (ಪ್ರಥಮ, ದ್ವಿತೀಯ, ತೃತೀಯ, ಮಕ್ಕಳ ಪುಸ್ತಕ, ಮುದ್ರಣ ಸೊಗಸು, ಮುಖಪುಟ ಚಿತ್ರ ವಿನ್ಯಾಸದ ಪ್ರಥಮ, ಮುಖಪುಟ ಚಿತ್ರಕಲೆಯ ದ್ವಿತೀಯ) ಬಹುಮಾನಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು-560002. ವೆಬ್‍ಸೈಟ್ ತಿತಿತಿ.ಞಚಿಟಿಟಿಚಿಜಚಿಠಿusಣಚಿಞಚಿಠಿ ಡಿಚಿಜhiಞಚಿಡಿಚಿ.ಛಿomನ್ನು, ದೂ.

080-22484516/ 22107704 ನ್ನು ಸಂಪರ್ಕಿಸಬಹುದು.