ಗೋಣಿಕೊಪ್ಪ ವರದಿ, ಜೂ. 21: ಗೋಣಿಕೊಪ್ಪ ರೋಟರಿ ಕ್ಲಬ್ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಕಾಡ್ಯಮಾಡ ಬಿ. ನವೀನ್, ಕಾರ್ಯದರ್ಶಿಯಾಗಿ ತಾಣಚ್ಚೀರ ಬಿ. ಪೂಣಚ್ಚ, ಉಪಾಧ್ಯಕ್ಷರಾಗಿ ಶುಭಾಷಿಣಿ ಕುಮಾರ್, ಜಂಟಿ ಕಾರ್ಯದರ್ಶಿಯಾಗಿ ಚೇಂದಂಡ ಸುಮಿ ಸುಬ್ಬಯ್ಯ, ಖಜಾಂಜಿಯಾಗಿ ಸಜನ್ ಚಂಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ರೋಟರಿ ನಿಯೋಜಿತ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಅಭಿವೃದ್ಧಿಪರ ಸಮಿತಿಗೆ ನಿರ್ದೇಶಕರನ್ನು ಹಾಗೂ ಮುಖ್ಯಸ್ಥರನ್ನು ಆಯ್ಕೆ ಮಾಡಲಾಗಿದೆ.
ಸಾರ್ಜೆಂಟ್ ಆಗಿ ಪ್ರಮೋದ್ ಕಾಮತ್, ಕ್ಲಬ್ ಸೇವಾ ನಿರ್ದೇಶಕರಾಗಿ ಡಾ. ಚಂದ್ರಶೇಖರ್, ವೃತ್ತಿಪರ ಸೇವಾ ನಿರ್ದೇಶಕರಾಗಿ ಬಿ.ಎ. ದೇಚಮ್ಮ, ಅಂತರ್ರಾಷ್ಟ್ರೀಯ ಸೇವಾ ಯೋಜನೆ ನಿರ್ದೇಶಕರಾಗಿ ಡಾ. ಸಿ.ಜಿ. ಕುಶಾಲಪ್ಪ, ಯುವ ಸೇವಾ ನಿರ್ದೇಶಕರಾಗಿ ಡಾ. ಆಶಿಕ್ ಚಂಗಪ್ಪ, ಪಲ್ಸ್ ಪೋಲಿಯೋ ಯೋಜನೆ ಮುಖ್ಯಸ್ಥರಾಗಿ ಟಿ.ಯು. ಮೋಹನ್, ಟಿಆರ್ಎಫ್ ಮುಖ್ಯಸ್ಥರಾಗಿ ಇಮ್ಮಿ ಉತ್ತಪ್ಪ, ಜಿಲ್ಲಾ ಯೋಜನಾ ಮುಖ್ಯಸ್ಥರಾಗಿ ಪಿ.ಬಿ. ಪೂಣಚ್ಚ, ತರಬೇತಿ ಮುಖ್ಯಸ್ಥರಾಗಿ ಎಂ.ಕೆ. ದೀನಾ, ವಿನ್ಸ್ ಮುಖ್ಯಸ್ಥರಾಗಿ ಡಾ. ಕೆ.ಪಿ. ಚಿಣ್ಣಪ್ಪ, ಸದಸ್ಯತ್ವ ಅಭಿವೃದ್ಧಿ ಸಮಿತಿ ಮುಖ್ಯಸ್ಥರಾಗಿ ವಾಸು ಉತ್ತಪ್ಪ, ವೆಬ್ಸ್ ಮುಖ್ಯಸ್ಥರಾಗಿ ಬೀಟಾ ಲಕ್ಷ್ಮಣ್, ಆರ್ಥಿಕ ಕ್ರೋಢೀಕರಣ ಸಮಿತಿ ಮುಖ್ಯಸ್ಥರಾಗಿ ಎಂ.ಜಿ. ಮೋಹನ್, ಬುಲೆಟಿನ್ ಮುಖ್ಯಸ್ಥರಾಗಿ ಸುಷ್ಮಾ ಚಂಗಪ್ಪ, ಆನ್ಸ್ಕ್ಲಬ್ ಅಧ್ಯಕ್ಷೆಯಾಗಿ ಮಮತಾ ಹೆಗ್ಡೆ, ಕಾರ್ಯದರ್ಶಿಯಾಗಿ ಕಾಡ್ಯಮಾಡ ಪವಿತ್ರಾ ನವೀನ್ ಅವರುಗಳನ್ನು ಆಯ್ಕೆ ಮಾಡಲಾಗಿದೆ.