*ಗೋಣಿಕೊಪ್ಪಲು, ಜೂ. 19: ಸಾಮಾಜಿಕ ಅರಣ್ಯ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಕುಕ್ಕರ್‍ಗಳನ್ನು ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ವಿತರಿಸಿದರು.

ಪೆÇನ್ನಂಪೇಟೆ ತಾ.ಪಂ. ಸಭಾಂಗಣದ ಸಾಮಥ್ರ್ಯ ಸೌಧದಲ್ಲಿ ಸುಮಾರು 48 ಫಲಾನುಭವಿಗಳಿಗೆ ಕುಕ್ಕರ್ ನೀಡಿದರು. ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್‍ಕುಮಾರ್, ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ, ಜಯ ಪೂವಯ್ಯ, ಆಶಾ ಜೇಮ್ಸ್, ಸೀತಮ್ಮ, ರಾಜು, ಸಾಮಾಜಿಕ ಅರಣ್ಯಾಧಿಕಾರಿ ಶಿವರಾಂ ಹಾಗೂ ಫಲಾನುಭವಿಗಳು ಹಾಜರಿದ್ದರು.ಸೋಮವಾರಪೇಟೆ: ಪಟ್ಟಣದ ಬೇಳೂರು ರಸ್ತೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿಶೆಟ್ಟಿ ಅವರು ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿದರು.

ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಬಿ.ಪಿ. ಚನ್ನವೀರಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕಿ ಜಿ.ಎಸ್. ಶೈಲಾ ಉಪಸ್ಥಿತರಿದ್ದರು.*ಗೋಣಿಕೊಪ್ಪಲು: ಪೆÇನ್ನಪ್ಪಸಂತೆ ಗ್ರಾ.ಪಂ. ವ್ಯಾಪ್ತಿಯ ಕೇಂದ್ರ ಸರ್ಕಾರದ ಉಜ್ವಲ್ ಯೋಜನೆಯ 46 ಫಲಾನುಭವಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಅಡುಗೆ ಅನಿಲ ವಿತರಿಸಿದರು.

ಪೆÇನ್ನಪ್ಪಸಂತೆ ಗ್ರಾ.ಪಂ. ಸಭಾಂಗಣದಲ್ಲಿ ಬಿಳೂರು, ಬೆಸಗೂರು ಮತ್ತು ನಲ್ಲೂರು ಗ್ರಾಮಗಳ ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭ ಪೆÇನ್ನಪ್ಪಸಂತೆ ಗ್ರಾ.ಪಂ. ಅಧ್ಯಕ್ಷ ಎಂ.ಎಂ. ಗುಲ್ಶಾದ್, ಉಪಾಧ್ಯಕ್ಷ ಎಂ.ಕೆ. ತನುಜಾ, ಆರ್.ಎಂ.ಸಿ. ಅಧ್ಯಕ್ಷ ಆದೇಂಗಡ ವಿನು ಚಂಗಪ್ಪ ಉಪಸ್ಥಿತರಿದ್ದರು.