ವೀರಾಜಪೇಟೆ, ಜೂ.19: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ತಾ. 21 ರಂದು ಸ್ಥಳೀಯ ತ್ರಿವೇಣಿ ಶಾಲೆಯಲ್ಲಿ ಗುರುಕುಲಂ ಯೋಗ ಸಂಸ್ಥೆಯ ವರಿಂದ ಯೋಗ ದಿನಾಚರಣೆ ನಡೆಯಲಿದೆ. ಬೆಳಿಗ್ಗೆ 7 ಗಂಟೆಗೆ ಅರಮೇರಿ ಕಳಂಚೇರಿ ಮಠಾಧಿಪತಿ ಗಳಾದ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು ಉದ್ಘಾಟನೆ ನೆರವೇರಿಸಲಿದ್ದಾರೆ. ಭಾರತೀಯ ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಮುಖ್ಯ ಅತಿಥಿಗಳಾಗಿರುತ್ತಾರೆ. ಕದನೂರು ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಮೂಕೋಂಡ ಶಶಿ ಸುಬ್ರಹ್ಮಣಿ, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ ಹಾಗೂ ಆರ್.ಎಸ್.ಎಸ್. ಪ್ರಮುಖ ಚಕ್ಕೇರ ಮನು ಅತಿಥಿಗಳಾಗಿರುತ್ತಾರೆ ಎಂದು ಸಂಚಾಲಕ ಪುಟ್ಟಿಚಂಡ ಬೋಪಣ್ಣ ತಿಳಿಸಿರುತ್ತಾರೆ.