ಗೋಣಿಕೊಪ್ಪಲು, ಜೂ. 19: ಕಳೆದ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಜಲಪ್ರಳಯದಲ್ಲಿ ತೀವೃ ಸಂತ್ರಸ್ತರಾದ ಅರ್ಹ 24 ಮಂದಿ ಫಲಾನುಭವಿಗಳನ್ನು ಗುರುತಿಸಿ ತಾ. 17 ರಂದು ಮಡಿಕೇರಿಯಲ್ಲಿ ಪರಿಹಾರ ಚೆಕ್ ವಿತರಿಸಲಾಯಿತು.
ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಿಂದಿನ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರ ಊಟದ ಭತ್ಯೆಯಲ್ಲಿನ ಪಾಲುಹಣ, ದಾನಿಗಳ ನೆರವಿನೊಂದಿಗೆ ಸುಮಾರು ರೂ. 2.40 ಲಕ್ಷ ಮೊತ್ತವನ್ನು ಸಂತ್ರಸ್ತರಿಗೆ ವಿತರಿಸಲು ಸಂಗ್ರಹಿಸಲಾಗಿದ್ದು ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್ ಮತ್ತು ನಿರ್ದೇಶಕರ ತಂಡ ಮಡಿಕೇರಿಯಲ್ಲಿನ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಫಲಾನುಭವಿಗಳಿಗೆ ತಲಾ ರೂ. 10050 ರಂತೆ ವಿತರಣೆ ಮಾಡಿದರು.
ಮುಕ್ಕೋಡ್ಲುವಿನ ಎಂ.ಪಿ. ಪೆÇನ್ನಪ್ಪ, ಎಸ್.ಪಿ. ಉತ್ತಯ್ಯ, ಟಿ.ಕೆ. ಕುಶಾಲಪ್ಪ, ಟಿ.ಕೆ. ಕುಮಾರ, ಎನ್.ಕೆ. ಅಕ್ಕವ್ವ, ಎಸ್.ಟಿ. ಸೋಮಣ್ಣ, ರಾಜೇಶ್ ಕಾವೇರಪ್ಪ, ಟಿ.ಸಿ. ಬಿದ್ದಪ್ಪ, ಓ.ಡಿ. ಅಯ್ಯಣ್ಣ, ಕೆ.ಜೆ. ಚರ್ಮಣ, ಮಕ್ಕಂದೂರುವಿನ ಕೆ.ಎಸ್. ಸರಸ್ವತಿ, ಎಸ್.ಬಿ. ಚಿನ್ನಮ್ಮ, ಮೇಘತ್ತಾಳು ಗ್ರಾಮದ ಪೂವಯ್ಯ ಎಂ.ಡಿ., ಟಿ.ಪಿ. ತಮ್ಮಯ್ಯ, ಪೆÇನ್ನಪ್ಪ ಸಿ.ಸಿ., ಎಂ.ಎಂ. ತಿಮ್ಮಯ್ಯ, ಡಿ.ಎಸ್. ಪ್ರೇಮ, ಹೆಮ್ಮೆತ್ತಾಳು ಗ್ರಾಮದ ಎಸ್. ಪದ್ಮನಾಭ, ಎ.ಪಿ. ಮುತ್ತಪ್ಪ, ಎ.ಕೆ. ಪೆಮ್ಮಯ್ಯ, ಎಸ್.ಪಿ. ಸಂತೋಷ್, ಪಿ.ಪಿ. ಗಂಗಾಧರ ಶಶಿ ಕೆ.ಎಸ್. ಹಾಗೂ ವಿಜಯ ಪಿ.ಪಿ. ಎಂಬವರಿಗೆ ಡಿ.ಸಿ.ಸಿ. ಬ್ಯಾಂಕ್ ಚೆಕ್ ವಿತರಿಸಲಾಯಿತು.
ಸಹಕಾರ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್ ಅವರು ಚೆಕ್ ವಿತರಣೆ ಮಾಡಿ, ಇದೊಂದು ಸಣ್ಣ ಪ್ರಮಾಣದ ನೆರವು ಮಾತ್ರಾ. ಸಂತೃಸ್ತರು ಯಾರೂ ಧೃತಿಗೆಡದೆ ಮತ್ತೆ ಬದುಕು ರೂಪಿಸಿಕೊಳ್ಳುವಂತೆಯೂ, ಜಿಲ್ಲಾಧಿಕಾರಿ ಶ್ರೀವಿದ್ಯಾ ಅವಧಿಯಲ್ಲಿಯೇ ಪರಿಹಾರ ವಿತರಣೆಗೆ ತೀರ್ಮಾನ ಕೈಗೊಳ್ಳಲಾಗಿತ್ತಾದರೂ ನೇರವಾಗಿ ಸಂತೃಸ್ತರಿಗೆ ನೆರವು ತಲಪಿಸುವ ಉದ್ಧೇಶದೊಂದಿಗೆ ಮಾಜಿ ಜಿ.ಪಂ. ಅಧ್ಯಕ್ಷ ರವಿ ಕುಶಾಲಪ್ಪ ಹಾಗೂ ಮುಕ್ಕೋಡ್ಲುವಿನ ಸತೀಶ್ ಎಂಬವರ ಸಹಕಾರದೊಂದಿಗೆ 24 ಸಂತ್ರಸ್ತರ ಪಟ್ಟಿ ತಯಾರಿಸಲಾಗಿದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ವ್ಯವಸ್ಥಾಪಕಿ ಆರ್. ಮಂಜುಳಾ ಮಾತನಾಡಿ, ಸಹಕಾರ ಸಂಘಗಳು ನೇರವಾಗಿ ಅರ್ಹರನ್ನು ಹುಡುಕಿ ಪರಿಹಾರ ವಿತರಣೆ ಮಾಡುತ್ತಿರುವದು ಶ್ಲಾಘನೀಯ. ಇದರ ಸದ್ವಿನಿಯೋಗ ಆಗಲಿ. ಪರಿಹಾರ ಮೊತ್ತದಲ್ಲಿ ತಾರತಮ್ಯ ತೋರದೆ ಸಮಾನ ಹಂಚಿಕೆ ಮಾಡಲಾಗಿದೆ. ಕೊಡಗು ಜಿಲ್ಲೆ ಮತ್ತೆ ಎಂದಿನ ಸ್ಥಿತಿಗೆ ಮರಳುವಂತಾಗಲಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಸಿ.ಬಿ. ಬೆಳ್ಳಿಯಪ್ಪ, ಕಾಡ್ಯಮಾಡ ಬೋಪಣ್ಣ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಓ ವಿ.ಆರ್. ಉಮೇಶ್, ಉಪಾಧ್ಯಕ್ಷ ಕೆ.ಸಿ. ಮುತ್ತಪ್ಪ, ನಿರ್ದೇಶಕರಾದ ಕೆ.ಎಸ್. ಬೋಪಣ್ಣ, ಸಿ.ಬಿ. ಬೆಳ್ಳಿಯಪ್ಪ, ಹೆಚ್.ಕೆ. ಬೊಗ್ರು, ಎಂ.ಕೆ. ಪ್ರಕಾಶ್, ಎಂ.ಕೆ. ರವಿ, ಕೆ.ಎಸ್. ಭರತ್, ಪಿ. ಲೀನಾ ಬೋಪಣ್ಣ, ಕೆ. ನಿರ್ಮಲಾ ದಿನೇಶ್ ಹಾಗೂ ಎಂ.ಎನ್. ಅಶ್ವಿನಿ ಅವರುಗಳು ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಿಸಿದರು.
ಸಂತ್ರಸ್ತರಿಂದ ಆಧಾರ್ ಕಾರ್ಡ್ ಹಾಗೂ ವಾಸ ದ್ರಢೀಕರಣ ಪರಿಶೀಲಿಸಿ ‘ಚೆಕ್’ ವಿತರಿಸಲಾಗಿದೆ ಎಂದು ಅಧ್ಯಕ್ಷ ವಿವೇಕ್ ತಿಳಿಸಿದ್ದಾರೆ.
- ಟಿ.ಎಲ್. ಶ್ರೀನಿವಾಸ್