ವೀರಾಜಪೇಟೆ, ಜೂ. 19: ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಐದು ಮಂದಿಯನ್ನು ವೀರಾಜಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿ ಪಣಕ್ಕಿಟ್ಟಿದ್ದ ರೂ,32,180ನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ

ಬಿಟ್ಟಂಗಾಲದ ಮಜೀದ್ ಎಂಬವರ ಹೊಟೇಲ್ ಪಕ್ಕದ ಗುಡಿಸಲಿನಲ್ಲಿ ಜೂಜಾಡುತ್ತಿದ್ದ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಗ್ರಾಮಾಂತರ ಠಾಣಾ ಪೊಲೀಸರು ಬಿ.ಕೆ. ಭಕ್ತಾ, ಕೆ.ಎ. ಗಣೇಶ್, ಗಿರೀಶ್, ಪಿ.ಕೆ. ತಮ್ಮಯ್ಯ, ಕೆ.ಸಿ.ದಿನೇಶ್ ಇವರುಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಸುರೇಶ್ ಬೋಪಣ್ಣ, ಎ.ಎಸ್.ಐ. ಚಂದ್ರಪ್ಪ, ಸಿಬ್ಬಂದಿಗಳಾದ ಹೆಚ್.ಸಿ. ರವಿಕುಮಾರ್, ಹೆಚ್.ಸಿ.ರಾಮಪ್ಪ, ರಮೇಶ್ ಮತ್ತು ಚಂದ್ರಶೇಖರ್ ಭಾಗವಹಿಸಿದ್ದರು.