ಚೆಟ್ಟಳ್ಳಿ, ಜೂ. 17 : ಕೂರ್ಗ್ ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ದುಬೈ ವತಿಯಿಂದ ವರ್ಷಂಪ್ರತಿ ನಡೆಯುವ ಅರಬ್ ದೇಶದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೊಡಗಿನವರಿಗೆ ನಡೆದ ಕಾಲ್ಚೆಂಡು ಪಂದ್ಯಾಟದಲ್ಲಿ ಚಾಮಿಯಲ್ ತಂಡವು ಪೆನಾಲ್ಟಿ ಶೂಟೌಟ್ ನಲ್ಲಿ ಟಿಪ್ಪು ವಾರಿರ್ಯಸ್ ತಂಡವನ್ನು ಮಣಿಸಿ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿತು. ಸಮಬಲದ ಹೋರಾಟ ನಡೆಸಿ 3-3 ಗೋಲು ಸಾಧಿಸಿತು. ಪೆನಾಲ್ಟಿ ಶೂಟೌಟ್ ನಲ್ಲಿ ದಿಲ್ಸಾ ನಾಯಕತ್ವದ ಚಾಮಿಯಾಲ್ ತಂಡವು ಗೆಲುವು ಸಾಧಿಸಿ ಈದ್ ಟ್ರೋಫಿ ತಮ್ಮದಾಗಿಸಿಕೊಂಡರು.

ಟಿಪ್ಪು ವಾರಿಯರ್ಸ್ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ಪಿಪಟ್ಟು ಕೊಂಡಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಚಾಮಿಯಾಲ್ ತಂಡದ ನಿಜಾಮ್, ಅತ್ಯುತ್ತಮ ಗೋಲ್ ಕೀಪರ್ ಶಂಸಿ, ಪಡೆದುಕೊಂಡರು. ಈ ಸಂದರ್ಭ ವೇದಿಕೆಯಲ್ಲಿ ಜಲೀಲ್ ಕುಂಜಿಲ, ಫೈಸಿ ವೀರಾಜಪೇಟೆ, ರಫೀಕಲಿ, ಸಮೀರ್ ಇದ್ದರು.