ಕೂಡಿಗೆ, ಜೂ. 18 : ಕುಶಾಲನಗರ ಬಳಿ ಬಾಳುಗೊಡು ಸಮೀಪ ಕಾರು- ಬೈಕ್ ಮುಖಾ ಮುಖಿ ಡಿಕ್ಕಿಯಾದ ಘಟನೆ ನಡೆದಿದೆ. ಕಾರು (ಕೆ.ಎ. 41 ಎಂ.ಎಂ. 0528) ದುಬಾರೆ ಕಡೆಗೆ ಹೋಗುತ್ತಿದ್ದು, ಬೈಕ್ (ಕೆ.ಎ.13 ಇ.ಇ. 6691) ಮುಖಾಮುಖಿಯಾಗಿ ಡಿಕ್ಕಿಯಾಗಿ ಬೈಕ್ ಸವಾರ ನಾಣಯ್ಯ ಅವರ ಕೈ ಮುರಿತಗೊಂಡು ಕಾಲಿಗೆ ಗಾಯವಾಗಿ ಮಡಿಕೇರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಣಯ್ಯ ಶನಿವಾರಸಂತೆ ಹತ್ತಿರದ ತರಗಳಲೆ ಗ್ರಾಮದವರಾಗಿದ್ದಾರೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.