ಮಡಿಕೇರಿ, ಜೂ. 18 : ಸೂರಿಲ್ಲದವರಿಗೆ ಮನೆ ನಿರ್ಮಿಸಿ ಸೂಕ್ತ ಆಶ್ರಯ ನೀಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಆದ್ಯತೆಯ ಮೇರೆಗೆ ಕಾರ್ಯಪ್ರವೃತ್ತವಾಗಬೇಕೆಂದು ಅಂತರರಾಷ್ಟ್ರೀಯ ರೋಟರಿಯ ಮಾಜಿ ಅಧ್ಯಕ್ಷ ಕಲ್ಯಾಣ್ ಬ್ಯಾನರ್ಜಿ ಕರೆ ನೀಡಿದ್ದಾರೆ. ಮಾದಾಪುರ ಬಳಿಯ ಇಗ್ಗೋಡ್ಲು ಗ್ರಾಮದಲ್ಲಿ ರೋಟರಿ ಜಿಲ್ಲೆ 3181 ನಿಂದ ರೀ ಬಿಲ್ಡ್ ಕೊಡಗು ಮಡಿಕೇರಿ, ಜೂ. 18 : ಸೂರಿಲ್ಲದವರಿಗೆ ಮನೆ ನಿರ್ಮಿಸಿ ಸೂಕ್ತ ಆಶ್ರಯ ನೀಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಆದ್ಯತೆಯ ಮೇರೆಗೆ ಕಾರ್ಯಪ್ರವೃತ್ತವಾಗಬೇಕೆಂದು ಅಂತರರಾಷ್ಟ್ರೀಯ ರೋಟರಿಯ ಮಾಜಿ ಅಧ್ಯಕ್ಷ ಕಲ್ಯಾಣ್ ಬ್ಯಾನರ್ಜಿ ಕರೆ ನೀಡಿದ್ದಾರೆ. ಮಾದಾಪುರ ಬಳಿಯ ಇಗ್ಗೋಡ್ಲು ಗ್ರಾಮದಲ್ಲಿ ರೋಟರಿ ಜಿಲ್ಲೆ 3181 ನಿಂದ ರೀ ಬಿಲ್ಡ್ ಕೊಡಗು ಗುರುತಿಸಿ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ರೋಟರಿ ಮುಂದಾಗ ಬೇಕೆಂದು ಸೂಚಿಸಿದರು. ಕೊಡಗಿನಲ್ಲಿ ಪ್ರಕೃತ್ತಿ ವಿಕೋಪ ಸಂತ್ರಸ್ತರಿಗೆ ರೋಟರಿ ಜಿಲ್ಲೆ 3181 ವತಿಯಿಂದ 25 ಮನೆ ನಿರ್ಮಿಸಿ ಕೊಟ್ಟಿರುವದು ಶ್ಲಾಘನೀಯ ಎಂದು ಹೇಳಿದ ಕಲ್ಯಾಣ್ ಬ್ಯಾನರ್ಜಿ ಮುಂದಿನ ಹಂತದಲ್ಲಿ 25 ಮನೆಗಳ ನಿರ್ಮಾಣಕ್ಕೆ ತಾನು ಕೂಡ ಭಾರತಾದ್ಯಂತಲಿನ ರೋಟರಿ ಕ್ಲಬ್‍ಗಳ ಸಹಕಾರದಿಂದ ನೆರವು ನೀಡುವದಾಗಿ ಭರವಸೆ ನೀಡಿದರಲ್ಲದೇ ಕೊಡಗಿನ ಸಂತ್ರಸ್ತರಿಗೆ ಎಷ್ಟು ಅಗತ್ಯವಿದೆಯೋ ಅಷ್ಟೂ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿ, ತಾನು ಯೋಜನೆಗೆ ಬೆಂಬಲಿಸುವದಾಗಿಯೂ ಹೇಳಿದರು.ಮನೆ ನಿರ್ಮಿಸಿಕೊಡುವದು ಪುಣ್ಯದ ಕೆಲಸವಾಗಿದ್ದು, ಪ್ರತಿ ಯೋರ್ವರ ಜೀವನ ಕೂಡ ಮನೆಯಿಂದಲೇ ಪ್ರಾರಂಭವಾಗುತ್ತದೆ. ಮಹಿಳೆ, ಮಕ್ಕಳಿಗೆ ಮನೆಯೇ ಭದ್ರತೆಯ ಭಾವನೆ ಮೂಡಿಸುತ್ತದೆ. ಹೀಗಿರುವಾಗ ಉತ್ತಮ ಮನೆಗಳನ್ನು ಕಡಿಮೆ ವೆಚ್ಚದಲ್ಲಿಯೂ ನಿರ್ಮಿಸಲು ಸಾಧ್ಯ ಎಂಬದನ್ನು ರೋಟರಿ ಸಂಸ್ಥೆಯು ಹ್ಯಾಬಿಟೇಟ್ ಫಾರ್ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯ ಮೂಲಕ ಭಾರತದಾದ್ಯಂತ ಈಗಾಗಲೇ ನಿರೂಪಿಸಿದೆ ಎಂದು ಬ್ಯಾನರ್ಜಿ ಶ್ಲಾಘಿಸಿದರು.

ರೋಟರಿ ಜಿಲ್ಲಾ ಗವರ್ನರ್ ಪಿ.ರೋಹಿನಾಥ್ ಮಾತನಾಡಿ, ಕೊಡಗಿನಲ್ಲಿ ಜಲಪ್ರಳಯ ಸಂಭವಿಸಿದಾಗ ಸಂತ್ರಸ್ತರಿಗೆ ಅಗತ್ಯವಿದ್ದ ಮನೆ ನಿರ್ಮಾಣಕ್ಕೆ ರೋಟರಿ ಜಿಲ್ಲೆ 3181 ಮುಂದಾಯಿತು. ಕೇವಲ 3 ತಿಂಗಳಲ್ಲಿ 25 ಮನೆಗಳನ್ನು ತಲಾ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಂತ್ರಸ್ತರಿಗೆ

(ಮೊದಲ ಪುಟದಿಂದ) ಯೋಗ್ಯ ಮನೆಗಳನ್ನು ನಿಗಧಿತ ಅವಧಿಯಲ್ಲಿಯೇ ನೀಡಿದ ತೃಪ್ತಿ ತನಗಿದೆ ಎಂದರು.

ರೋಟರಿಗಾಗಿ ಮನೆಗಳನ್ನು ನಿರ್ಮಿಸಿಕೊಟ್ಟ ಹ್ಯಾಬಿಟೇಟ್ ಫಾರ್ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜನ್ ಸ್ಯಾಮುವೆಲ್ ಮಾತನಾಡಿ, ಭಾರತದಲ್ಲಿ ಶೇ. 40 ರಷ್ಟು ಜನರು ವಿಕೋಪ ಸಂಭವಿಸಿದಾಗ ಸಂತ್ರಸ್ತರಾಗುತ್ತಾರೆ. ಕೊಡಗಿನಲ್ಲಿ ರೋಟರಿ ಸಂಸ್ಥೆ ವತಿಯಿಂದ ಹ್ಯಾಬಿಟೇಟ್ ಫಾರ್ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯು 25 ಮನೆಗಳನ್ನು ತಲಾ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದು 10 ಕುಟುಂಬಗಳಲ್ಲಿ ಮಹಿಳೆಯರೇ ನಿರ್ವಹಿಸುತ್ತಿದ್ದು ಐವರು ವಿಧವೆಯರೂ ಮನೆಗಳ ಫಲಾನುಭವಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಹ್ಯಾಬಿಟೇಟ್ ಫಾರ್ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯ ಹಿರಿಯ ನಿರ್ದೇಶಕ ಸಂಜಯ್ ದಾಸ್ವಾನಿ ಮಾಹಿತಿ ನೀಡಿ. 36 ವರ್ಷಗಳಿಂದ ತಮ್ಮ ಸಂಸ್ಥೆಯು ಕಡಿಮೆ ವೆಚ್ಚದಲ್ಲಿ ಉತ್ತಮ ಮನೆಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೂ ಇಗ್ಗೋಡ್ಲುವಿನಲ್ಲಿ ವಿದ್ಯುತ್ ನೀಡಲಾಗಿದೆ ಎಂದರು.

ರೋಟರಿಯ ರೀಬಿಲ್ಡ್ ಕೊಡಗು ಯೋಜನೆಯ ಅಧ್ಯಕ್ಷ ಡಾ.ರವಿ ಅಪ್ಪಾಜಿ ಮಾತನಾಡಿ, 1 ಬೆಡ್ ರೂಮ್, ಅಡುಗೆ ಕೋಣೆ, 1 ಹಾಲ್, ಶೌಚಾಲಯವನ್ನು ಹೊಂದಿರುವ 320 ಚದರ ಅಡಿ ವಿಸ್ತೀರ್ಣದ ತಲಾ 5 ಲಕ್ಷ ರೂ. ವೆಚ್ಚವಾಗಿರುವ ಮನೆಗಳಿಗೆ ಮಾರ್ಚ್ 28 ರಿಂದ ಕಾಮಗಾರಿ ಪ್ರಾರಂಭಿಸಲಾಗಿದ್ದು ಕೇವಲ 3 ತಿಂಗಳಲ್ಲಿ ಮನೆ ನಿರ್ಮಿಸಿ ಫಲಾನುಭವಿಗಳಿಗೆ ಮಳೆಗಾಲಕ್ಕೂ ಮುನ್ನ ನೀಡಿದ ತೃಪ್ತಿಯಿದೆ ಎಂದರು.

ರೋಟರಿ ಮಾಜಿ ಗವರ್ನರ್ ಕೃಷ್ಣಶೆಟ್ಟಿ ಮಾತನಾಡಿ, ಕರ್ನಾಟಕದ ವಿವಿಧ ರೋಟರಿ ಕ್ಲಬ್ ಗಳಿಂದಲ್ಲದೇ, ಹೈದರಾಬಾದ್, ಗುಂಟೂರು, ಚೆನ್ನೈ, ಅಮೇರಿಕಾ, ಅಬುದಾಬಿ, ಪೂನಾ ದಿಂದಲೂ ಕೊಡಗಿನ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕಾಗಿ ಆರ್ಥಿಕ ನೆರವು ಲಭಿಸಿದೆ ಎಂದರು.

ರೋಟರಿ ಜಿಲ್ಲೆ 3182 ನ ಗವರ್ನರ್ ಅಭಿನಂದನ್ ಶೆಟ್ಟಿ ಮಾತನಾಡಿ, ಪ್ರಕೃತ್ತಿ ವಿಕೋಪ ಸಂಭವಿಸಿದಾಗ ಇಂಥ ದುರಂತದಿಂದ ಹೇಗೆ ಮೇಲೆದ್ದು ನಿಲ್ಲುತ್ತೇವೆ ಎಂಬದು ಮುಖ್ಯವಾಗುತ್ತದೆ. ಕೊಡಗಿನ ಸಂತ್ರಸ್ತರು ಛಲದಿಂದ ವಿಕೋಪವನ್ನು ಎದುರಿಸಿ ಮೇಲೆದ್ದು ನಿಂತಿದ್ದಾರೆ. ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕಾಗಿ ರೋಟರಿಯ ಸದಸ್ಯರು ಒಂದಾಗಿ ಸಹಾಯ ನೀಡಿದ್ದು ಶ್ಲಾಘನೀಯ ಎಂದು ಸಂತೋಷ ವ್ಯಕ್ತಪಡಿಸಿದರು. ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ಲತಾ ಮಾತನಾಡಿ, ರೋಟರಿಯು ನೀಡಿದ್ದ ಭರವಸೆಯಂತೆ 3 ತಿಂಗಳಲ್ಲಿ ಸಂತ್ರಸ್ತರಿಗೆ ತಮ್ಮೂರಿನಲ್ಲಿ ಮನೆ ನಿರ್ಮಿಸಿಕೊಟ್ಟಿದೆ ಎಂದು ಅಭಿನಂದಿಸಿದರು.

ರೋಟರಿ ಜಿಲ್ಲೆಯ ಮಾಜಿ ಗವರ್ನರ್‍ಗಳಾದ ಡಾ. ನಾಗಾರ್ಜುನ್, ದೇವದಾಸರೈ, ಮಾತಂಡ ಸುರೇಶ್ ಚಂಗಪ್ಪ, ಆರ್.ಕೃಷ್ಣ, ನಾಗೇಂದ್ರಪ್ರಸಾದ್, ಮುಂದಿನ ಸಾಲಿನ ರೋಟರಿ ಗವರ್ನರ್ ಜ್ಯೊಸೆಫ್ ಮ್ಯಾಥ್ಯು, ನಿಯೋಜಿತ ಗವರ್ನರ್ ರಂಗನಾಥ ಭಟ್ ಹಾಜರಿದ್ದರು.

ಇದೇ ಸಂದರ್ಭ ರೋಟರಿ ಯಿಂದ ನಿರ್ಮಿಸಲಾದ ಮನೆಗಳನ್ನು ಗಣ್ಯರು ಪರಿಶೀಲಿಸಿ ಫಲಾನುಭವಿಗಳಿಗೆ ಮನೆಗಳ ಕೀಲಿಕೈ ಹಸ್ತಾಂತರಿಸಿದರು. ಕಾರ್ಯಕ್ರಮದ ನೆನಪಿಗಾಗಿ ಸಸಿಯನ್ನೂ ಕಲ್ಯಾಣ್ ಬ್ಯಾನರ್ಜಿ ನೆಟ್ಟರು. ಕುಶಾಲನಗರ ಇನ್ನರ್ ವೀಲ್ ಸಂಸ್ಥೆಯಿಂದ 25 ಫಲಾನುಭವಿಗಳಿಗೆ ಗ್ಯಾಸ್ ಸ್ಟೌವ್ ಮತ್ತು ವಾಟರ್ ಫಿಲ್ಟರ್ ಗಳನ್ನು ನೀಡಲಾಯಿತು. ರೋಟರಿ ಜಿಲ್ಲೆಯ ವಿವಿಧ ರೋಟರಿ ಕ್ಲಬ್ ಗಳ ಪ್ರಮುಖರು, ಮಾದಾಪುರ ವ್ಯಾಪ್ತಿಯ ಗ್ರಾಮಸ್ಥರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.