ಮಡಿಕೇರಿ, ಜೂ. 18: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬೆಳೆಸಾಲ ಮನ್ನಾ ಯೋಜನೆಯಡಿ ಕೊಡಗು ಜಿಲ್ಲೆಯ ವಾಣಿಜ್ಯ ಬ್ಯಾಂಕ್ಗಳಲ್ಲಿ ಬೆಳೆ ಸಾಲ ಪಡೆದ 12277 ರೈತರ ಪೈಕಿ 3656 ರೈತರ ಒಟ್ಟು ರೂ. 11.82 ಕೋಟಿ ಮನ್ನಾ ಮಾಡಲಾಗಿದೆ. ಬೆಳೆ ಸಾಲ ಮನ್ನಾವಾದ ರೈತವಾರು ವಿವರಗಳನ್ನು ಕೊಡಗು ಜಿಲ್ಲಾ ವೆಬ್ಸೈಟ್ hಣಣಠಿs://ಞoಜಚಿgu/ಟಿiಛಿ.iಟಿನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗಿದೆ. ಸಹಕಾರಿ ಸಂಘಗಳ ಬ್ಯಾಂಕ್ಗಳಲ್ಲಿ ಸಾಲ ಪಡೆದ ರೈತರ ಸಾಲವನ್ನು ಮನ್ನಾ ಮಾಡಲು ತುರ್ತು ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.