ಗೋಣಿಕೊಪ್ಪಲು, ಜೂ. 18: ಅಲ್ಲಿ ಗ್ರಾಮದ ಮುಖಂಡರೆಲ್ಲರೂ ಒಂದೆಡೆ ಸೇರಿದ್ದರು.ಪರಿಸರ ಉಳಿಸುವ ನಿಟ್ಟಿನಲ್ಲಿ ತಮ್ಮದೇ ಆದ ರೀತಿಯಲ್ಲಿ ಚರ್ಚೆ ಆರಂಭಿಸಿದ್ದರು. ಕೊನೆಗೆ ಗ್ರಾಮದಲ್ಲಿರುವ ಶಾಲಾ ಆವರಣದ ಹಿಂಭಾಗದಲ್ಲಿರುವ ಒಂದು ಎಕರೆ ಖಾಲಿ ಜಾಗದಲ್ಲಿ ಪರಿಸರ ದಿನ ಅಂಗವಾಗಿ 250 ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ವಿಶ್ವ ಪರಿಸರ ದಿನದ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಪೊನ್ನಂಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಜಾಗವನ್ನು ಗುರುತಿಸಿ ಗಿಡ ನೆಡುವ ಕಾರ್ಯಕ್ರಮ ರೂಪಿಸಿದರು. ಪೊನ್ನಂಪೇಟೆ ಅರಣ್ಯ ಇಲಾಖೆಯ ಆರ್ಎಫ್ಓ ಗಂಗಾಧರ್ ಹಾಗೂ ಸಿಬ್ಬಂದಿಗಳು ಇವರಿಗೆ ಸಾಥ್ ನೀಡಿದರು.
ಗ್ರಾಮದ ಹಿರಿಯರಾದ ವಿಶ್ವ ವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ ಪುಚ್ಚಿಮಾಡ ಲಾಲಾ ಪೂಣಚ್ಚ, ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಅರಮಣಮಾಡ ಸುರೇಶ್, ವಲಯ ಅರಣ್ಯಾಧಿಕಾರಿ ಗಂಗಾಧರ್, ಹಿರಿಯ ರೈತ ಮುಖಂಡರಾದ ತೀತರಮಾಡ ವಿಜಯ್, ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಪುಳ್ಳಂಗಡ ದಿನೇಶ್, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ರೈತ ಮುಖಂಡರಾದ ಪುಚ್ಚಿಮಾಡ ನಟೇಶ್, ಪ್ರಾಣ್, ಸಂತೋಷ್, ರಾಯ್, ತೀತರಮಾಡ ಪ್ರಭು, ಮಲ್ಚೀರ ರತ್ತು, ಅನೀಶ್, ಗಿರೀಶ್, ಆದೇಂಗಡ ವಾಸು, ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸಂದ್ಯಾ ಸ್ವಾಗತಿಸಿ, ವಂದಿಸಿದರು.
-ಹೆಚ್.ಕೆ. ಜಗದೀಶ್