ಗುಡ್ಡೆಹೊಸೂರು, ಜೂ. 17: ಇಲ್ಲಿಗೆ ಸಮೀಪದ ಬಸವನಹಳ್ಳಿ ಮೂರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ ಗುಡ್ಡೆಹೊಸೂರು ಗ್ರಾ.ಪಂ. ವತಿಯಿಂದ ಸ್ವಚ್ಛಮೇವಾ ಜಯತೆ-ಜ¯ ಗಿಡಗಳನ್ನು ನೆಡುವದರೊಂದಿಗೆ ಆಚರಿಸಲಾಯಿತು.
ಪಿ.ಡಿ.ಓ. ಶ್ಯಾಂ ಮಾತನಾಡಿ ನಮ್ಮ ಪರಿಸರ ಉತ್ತಮವಾಗಿರಲು ಭೂಮಿಯೋಳಗೆ ಜಲಾವೃದ್ಧಿಗೊಳ್ಳಲು ಮರಗಳನ್ನು ನೆಟ್ಟು ಪೋಷಿಸುವಂತೆ ಶಾಲಾಮಕ್ಕಳಿಗೆ ಕಿವಿಮಾತು ಹೇಳಿದರು. ಗ್ರಾ.ಪಂ. ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷೆ ಲೀಲಾವತಿ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನದ ಚಂದ್ರಮೋಹನ್, ಪಂಚಾಯಿತಿ ಸದಸ್ಯ ಪ್ರವೀಣ್, ನಾರಾಯಣ, ಪ್ರಸನ್ನ, ಕಾವೇರಪ್ಪ, ಶಿವಪ್ಪ, ಪುಷ್ಪ, ಡಾಟಿ ಹಾಜರಿದ್ದರು.