ಕೂಡಿಗೆ, ಜೂ. 18: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಪರಿಶಿಷ್ಟ ಜಾತಿಯ ಕಾಲೋನಿಗೆ ಮಳೆಗಾಲದಲ್ಲಿ ವಾಸಕ್ಕೆ ಯೋಗ್ಯವಲ್ಲದ ಮನೆಗಳನ್ನು ಗುರುತಿಸಿ ತಾತ್ಕಾಲಿಕ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ಪ್ಲಾಸ್ಟಿಕ್ ಹೊದಿಕೆ (ಟಾರ್ಪಲ್) ವಿತರಿಸಲಾಯಿತು.

ಆರು ತಿಂಗಳ ಹಿಂದೆ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿನ ಸಮಸ್ಯೆಗಳನ್ನು ಅರಿತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಟಾರ್ಪಲ್ ಅನ್ನು ಒದಗಿಸಲಾಯಿತು.

ಈ ಸಂದರ್ಭ ಎಸ್.ಡಿ.ಪಿ.ಐ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಫೀ, ತಾಲೂಕು ಮುಸ್ಲಿಂ ಒಕ್ಕೂಟ, ಕುಶಾಲನಗರ ಅಧ್ಯಕ್ಷ ಹನೀಫ್, ಎಸ್.ಡಿ.ಪಿ.ಯ ನಗರಾಧ್ಯಕ್ಷ ಬಾಷಾ, ಬ್ಯಾಡಗೊಟ್ಟ ಹೋರಾಟ ಸಮಿತಿಯ ಪ್ರಮುಖರಾದ ಅಬ್ದುಲ್ ಸಲಾಂ, ಗಣೇಶ್, ಜಯ, ಅರುಣ್ ಉಪಸ್ಥಿತರಿದ್ದರು.