ಗೋಣಿಕೊಪ್ಪ ವರದಿ, ಜೂ. 18 : ಕಾಫಿ ಬೆಳೆಯಲ್ಲಿ ನೂತನ ತಂತ್ರಜ್ಞಾನದ ಮೂಲಕ ಗಿಡದ ರೆಂಬೆಗಳಿಂದ ಉತ್ಪಾದನೆ ಮಾಡುವ ಅಬೀಜ ಸಸ್ಯ ಪದ್ಧತಿ ಬಳಸಿಕೊಂಡು ಹೆಚ್ಚು ಇಳುವರಿ ಪಡೆಯಲು ಅವಕಾಶವಿದೆ ಎಂದು ಚಿಕ್ಕಮಗಳೂರು ಗೋಣಿಕೊಪ್ಪ ವರದಿ, ಜೂ. 18 : ಕಾಫಿ ಬೆಳೆಯಲ್ಲಿ ನೂತನ ತಂತ್ರಜ್ಞಾನದ ಮೂಲಕ ಗಿಡದ ರೆಂಬೆಗಳಿಂದ ಉತ್ಪಾದನೆ ಮಾಡುವ ಅಬೀಜ ಸಸ್ಯ ಪದ್ಧತಿ ಬಳಸಿಕೊಂಡು ಹೆಚ್ಚು ಇಳುವರಿ ಪಡೆಯಲು ಅವಕಾಶವಿದೆ ಎಂದು ಚಿಕ್ಕಮಗಳೂರು ಅರಣ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಿದ್ದ ಕಾಫಿ ಬೆಳೆಯಲ್ಲಿ ಅಬೀಜ ಕೃಷಿ ಪದ್ದತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಈಗಾಗಲೇ ರೋಬಸ್ಟಾ ಕಾಫಿ ರೆಂಬೆಯಿಂದ ಉತ್ಪಾದಿಸಿದ ಸಸ್ಯಗಳನ್ನು ಪಾತ್ಯಕ್ಷಿಕೆ ಮೂಲಕ ಬೆಳೆಯಲಾಗುತ್ತಿದೆ. 5 ವರ್ಷಗಳಲ್ಲಿ ಕಾಫಿ ಬೀಜ ಉತ್ಪಾದನೆ ಸರಾಸರಿಯಾಗಿ ಹೆಚ್ಚಾಗುತ್ತಿದೆ. ಇದರಂತೆ ಶೇ. 17 ರಿಂದ 20 ರವರೆಗೆ ಹೆಚ್ಚು ಇಳುವರಿ ಹೆಚ್ಚು ಉತ್ಪಾದನೆಯಾಗಿದೆ. ಇದರಿಂದ ಆರ್ಥಿಕವಾಗಿ ಕೂಡ ಹೆಚ್ಚು ಮುಂದು ವರಿಯಲು ಸಾಧ್ಯವಿದೆ. ಬೆಳೆಗಾರರು ಇಂತಹ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳಬೇಕು ಎಂದು ಹೇಳಿದರು.
ರೆಂಬೆಯನ್ನು ಆಯ್ಕೆ ಮಾಡುವಾಗ ಉತ್ತಮ ಗುಣಮಟ್ಟದ ಮರಗಳನ್ನು ಆಯ್ಕೆ ಮಾಡಬೇಕಿದೆ. ಸರಾಸರಿಯಾಗಿ
(ಮೊದಲ ಪುಟದಿಂದ) ಇಳುವರಿ ಕೊಡುವ ಗಿಡಗಳನ್ನು ಆಯ್ಕೆ ಮಾಡಿಕೊಂಡು ಸಸ್ಯ ಉತ್ಪಾದನೆಗೆ ಮುಂದಾಗಬೇಕು ಎಂದು ಅವರು ಹೇಳಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಪ್ರೊಫೆಸರ್ ಡಾ. ರಾಮಕೃಷ್ಣ ಹೆಗ್ಡೆ ಮಾತನಾಡಿ, ಅಬೀಜ ಕೃಷಿ ಪದ್ದತಿ ಹೆಚ್ಚು ಉತ್ಪಾದನೆಗೆ ಸಹಕಾರಿಯಾಗುತ್ತಿದೆ. ಗಿಡ ಉತ್ಪಾದನೆ ಸಂದರ್ಭ ಉತ್ತಮ ನಿರ್ವಹಣೆ ಮಾಡಬೇಕಿದೆ ಎಂದರು.
ಟಾಟಾ ಕಾಫಿ ತಾಂತ್ರಿಕತೆ ವೈಜ್ಞಾನಿಕ ಸಮಿತಿ ಸದಸ್ಯ ಡಾ. ಪಿ. ಕುರಿಯನ್ ರಫೆಲ್ ಮಾತನಾಡಿ, ಕಾಫಿ ಬೆಳೆಯಲ್ಲಿ ನಿರಂತರವಾಗಿ ನಿರ್ವಹಣಾ ಪದ್ದತಿ ಅನುಸರಿಸಬೇಕು. ಕೀಟ ಹತೋಟಿ, ಸೇರಿದಂತೆ ಗಿಡಗಳ ರಕ್ಷಣೆಗೆ ಹೆಚ್ಚು ಮುತುವರ್ಜಿ ವಹಿಸಬೇಕಿದೆ ಎಂದರು.
ಚೆಟ್ಟಳ್ಳಿ ಸಿಸಿಆರ್‍ಎಸ್ ಸಹಾಯಕ ಸಂಶೋಧಕ ಡಾ. ಶಿವಲಿಂಗಯ್ಯ ಅವರು ಪ್ರಾತ್ಯಕ್ಷಿಕೆ ಮೂಲಕ ಅಬೀಜ ಪದ್ದತಿ ಮೂಲಕ ಗಿಡಗಳ ಉತ್ಪಾದನೆ ಬಗ್ಗೆ ಮಾಹಿತಿ ನೀಡಿದರು. ಕಾಫಿ ಮಂಡಳಿ ಅಬೀಜ ಕೃಷಿ ಪದ್ದತಿಯ ಗಿಡಗಳನ್ನು ಉತ್ಪಾದಿಸಿ ಬೆಳೆಗಾರರಿಗೆ ರಿಯಾಯಿತಿ ದರದಲ್ಲಿ ತಲಪಿಸುವ ಕೆಲಸವಾಗಬೇಕಿದೆ ಎಂದು ಬೆಳೆಗಾರರು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಅಗ್ರಿಕಲ್ಚರಲ್ ಸೈನ್ಸಸ್ ಫೋರಂ ಅಧ್ಯಕ್ಷ ಕೆ. ಆರ್. ಬಾಬು, ಉಪಾಧ್ಯಕ್ಷ ಪಿ.ಎಸ್. ಸುಬ್ರಮಣಿ, ಕಾರ್ಯದರ್ಶಿ ಬಿ. ಎನ್. ಸತೀಶ್, ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಸಿ.ಜಿ. ಕುಶಾಲಪ್ಪ, ಪ್ರಾಕೃತಿಕ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡಾ. ಜಿ. ಎಂ. ದೇವಗಿರಿ ಉಪಸ್ಥಿತರಿದ್ದರು. -ಸುದ್ದಿಪುತ್ರ