ವೀರಾಜಪೇಟೆ, ಜೂ. 16: ರಾಜ್ಯ ಸರಕಾರ ನೂತನವಾಗಿ ಪೊನ್ನಂಪೇಟೆ ತಾಲೂಕು ಘೋಷಣೆ ಮಾಡಿದ ಹಿನ್ನೆಲೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೂತನ ಪೊನ್ನಂಪೇಟೆ ತಾಲೂಕು ಘಟಕವನ್ನು ಆರಂಭಿಸಿದೆ. ಇದೀಗ ವೀರಾಜಪೇಟೆ ತಾಲೂಕಿನಿಂದ ವಿಭಜನೆಗೊಂಡಿರುವದರಿಂದ ವಿವಿಧ ಪದಾಧಿಕಾರಿಗಳ ಆಯ್ಕೆ ಹಾಗೂ ಇತರ ವಿಷಯಗಳಿಗೆ ಸಂಬಂಧಪಟ್ಟಂತೆ ಜಿಲ್ಲಾಧ್ಯಕ್ಷರ ಸೂಚನೆಯ ಮೇರೆಗೆ ತಾ. 26 ರಂದು ಮಧ್ಯಾಹ್ನ 3 ಗಂಟೆಗೆ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಧೋಶ್ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರ ಸಭೆಯನ್ನು ಏರ್ಪಡಿಸಲಾಗಿದೆ.

ಈ ಸಭೆಗೆ ಜಿಲ್ಲಾಧ್ಯಕ್ಷ ಲೋಕೇಶ್‍ಸಾಗರ್ ಆಗಮಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‍ನ ಸದಸ್ಯರು ಈ ಸಭೆಗೆ ಆಗಮಿಸಿ ಸೂಕ್ತ ಸಲಹೆ ಸೂಚನೆಗಳೊಂದಿಗೆ ಸಹಕರಿಸಬೇಕಾಗಿ ವೀರಾಜಪೇಟೆ ತಾಲೂಕು ಸಹ ಕಾರ್ಯದರ್ಶಿ ಎಂ.ಕೆ. ನಳಿನಾಕ್ಷಿ ಕೋರಿದ್ದಾರೆ.