ಶನಿವಾರಸಂತೆ, ಜೂ. 14: ಸಮೀಪದ ಕೊಡ್ಲಿಪೇಟೆಯ 1ನೇ ವಿಭಾಗದ ರಸ್ತೆಯಲ್ಲಿ ಮನೆಯೊಂದರ ಮುಂಭಾಗ ನೀರಿನ ಪೈಪ್ ತುಂಡಾಗಿ ಕುಡಿಯುವ ನೀರು ಪೋಲಾಗುತ್ತಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ದೂರು ನೀಡಿ ಒಂದು ವರ್ಷ ಉರುಳಿದರೂ ದುರಸ್ತಿಪಡಿಸಲಿಲ್ಲ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂರು ತಿಂಗಳ ಹಿಂದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರನ್ನೇ ಸ್ಥಳಕ್ಕೆ ಕರೆದೊಯ್ದು ನೀರು ಪೋಲಾಗುತ್ತಿರುವದನ್ನು ತೋರಿಸಿದರೂ ಗ್ರಾಮ ಪಂಚಾಯಿತಿ ಈವರೆಗೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಪುಷ್ಪಾ ರಾಜೇಶ್ ಆಕ್ಷೇಪಿಸಿದ್ದಾರೆ.

ಕುಡಿಯುವ ನೀರನ್ನು ಪೋಲಾಗಲು ಬಿಡಬಾರದು. ಸದುಪಯೋಗಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಅವರು ಕೋರಿದ್ದಾರೆ.