ಗೋಣಿಕೊಪ್ಪ, ಜೂ. 13: ಕೊಡಗಿನ ಪಿ.ಬಿ.ಅಚ್ಚಪ್ಪ (ಅಜಿತ್) ಕರ್ನಾಟಕ ಸರ್ಕಾರ ಅಡ್ವಕೇಟ್ ಜನರಲ್ ಕಚೇರಿಯಲ್ಲಿ ಅಪರ ಸರ್ಕಾರಿ ವಕೀಲರಾಗಿ ನಿಯೋಜನೆಗೊಂಡಿದ್ದಾರೆ. ಇವರು ರಾಜ್ಯ ಉಚ್ಚ ನ್ಯಾಯಾಲಯದ ವಕೀಲರಾಗಿದ್ದು, ಮೂಲತಃ ವೀರಾಜಪೇಟೆ ತಾಲೂಕಿನ ಕುಟ್ಟಂದಿ ಗ್ರಾಮದ ನಿವಾಸಿ ಪಾಲೆಕಂಡ ಬೆಳ್ಯಪ್ಪ (ಡಿಕ್ಕ) ಮತ್ತು ಭಾಗೀರತಿ ದಂಪತಿಗಳ ಹಿರಿಯ ಪುತ್ರ.