ಚೆಟ್ಟಳ್ಳಿ, ಜೂ. 13: ಮಾನವೀಯ ಸ್ನೇಹಿತರ ಒಕ್ಕೂಟದ ವ್ಯಾಟ್ಸ್ ಅಪ್ ಗ್ರೂಪ್ ವತಿಯಿಂದ ಜಿಲ್ಲಾ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಲುಂಗಿಯನ್ನು ವಿತರಿಸಲಾಯಿತು. ಗ್ರೂಪ್‍ನ ಮೈಕಲ್ ವೆಗಾಸ್ ಮಾತನಾಡಿ, ಒಕ್ಕೂಟದ ವ್ಯಾಟ್ಸ್ ಅಪ್ ರಕ್ತದಾನ, ಬಡವರಿಗೆ ಆರ್ಥಿಕ ಸಹಾಯ ಹಾಗೂ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವದು ಗ್ರೂಪಿನ ಮುಖ್ಯ ಉದ್ದೇಶವಾಗಿದೆ ಎಂದರು. ಮುಂದಿನ ದಿನಗಳಲ್ಲಿ 35 ಬಡ ಮಕ್ಕಳಿಗೆ ಉಚಿತ ಪುಸ್ತಕ ಹಾಗೂ ಇನ್ನಿತರ ವಸ್ತುಗಳನ್ನು ನೀಡುವದಾಗಿ ಹೇಳಿದರು. ರಶೀದ್ ಕೂರತ್ ಮಾತನಾಡಿ, ಈ ಕಾರ್ಯಕ್ರಮ ದಾನಿಗಳ ಸಹಾಯದಿಂದ ಯಶಸ್ವಿಯಾಗಿದೆ ಎಂದರು. ದಾನಿಗಳಾದ ವಿನು ಮಡಿಕೇರಿ ಹಾಗೂ ಮೊಯ್ದು, ಗ್ರೂಪಿನ ಸದಸ್ಯರು ಹಾಜರಿದ್ದರು.