ನಾಪೋಕ್ಲು: ಜೂ.13. ಕೊಡಗಿನ ಆರಾಧ್ಯದೈವ ಮಳೆ ದೇವರೆಂದೆ ಖ್ಯಾತಿ ಪಡೆದಿರುವ ಕಕ್ಕಬೆ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯಕ್ಕೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅಜ್ಜಿಕುಟ್ಟಿರ ಎಸ್. ಬೋಪಣ್ಣ ಅವರು ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಅಸ್ಸಾಂ ರಾಜ್ಯದ ಗೌಹಾಟಿ ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರಾಗಿ ಜವಾಬ್ದಾರಿ ನಿಬಾಯಿಸಿ ಬಳಿಕ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಪದೋನ್ನತಿ ಹೊಂದಿದ ಅಜ್ಜಿಕುಟ್ಟಿರ ಎಸ್. ಬೋಪಣ್ಣ ಅವರು, ಪತ್ನಿ ಮುತ್ತಮ್ಮ ಹಾಗೂ ಪುತ್ರಿ ವ್ರಶ್ಚಿಕರೊಂದಿಗೆ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಮುಖ್ಯ ಆರ್ಚಕ ಕುಶ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು.ಈ ಸಂದರ್ಭ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಪಾರುಪತ್ಯೇಗಾರ ಪರದಂಡ ಪ್ರಿನ್ಸ್ ತಮ್ಮಪ್ಪ,
(ಮೊದಲ ಪುಟದಿಂದ) ಕಣಿಯರ ಹರೀಶ್, ನಾಪೋಕ್ಲುವಿನ ಕಂದಾಯ ಅಧಿಕಾರಿ, ಗ್ರಾಮಲೆಕ್ಕಿಗರು ಮತ್ತಿತರರು ಹಾಜರಿದ್ದರು. ಇದಕ್ಕೂ ಮುನ್ನ ಅಜ್ಜಿಕುಟ್ಟಿರ ಎಸ್. ಬೋಪಣ್ಣ ಅವರು, ಕೊಡಗಿನ ಪುಣ್ಯಕ್ಷೇತ್ರವಾದ ಭಾಗಮಂಡಲದ ಭಗಂಡೇಶ್ವರ ದೇವಾಲಯ ಹಾಗೂ ತಲಕಾವೇರಿ ದೇವಾಲಯಕ್ಕೂ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. -ದುಗ್ಗಳ