*ಸಿದ್ದಾಪುರ, ಜೂ. 13: ಇಲ್ಲಿಗೆ ಸಮೀಪದ ಅಭ್ಯತ್ಮಂಗಲ ಗ್ರಾಮದ ಒಂಟಿಯಂಗಡಿ ಬಳಿಯ ಅತ್ತಿಮಂಗಲ ತೋಟದಲ್ಲಿ ಕಾಡಾನೆಗಳು ಧಾಳಿ ನಡೆಸಿದ್ದು, ಮೂವರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಸಂಭವಿಸಿದೆ.
ಕಾರ್ಮಿಕರಾದ ಮುರುಘ, ಅವನ ಪತ್ನಿ ಲೀಲಾ ಹಾಗೂ ಪ್ರಿಯ ಎಂಬವರುಗಳು ತೋಟ ಕೆಲಸದಲ್ಲಿ ನಿರತರಾಗಿದ್ದ ಸಂದರ್ಭ 3 ಕಾಡಾನೆಗಳು ಎದುರಾಗಿವೆ. ಕಾರ್ಮಿಕರು ಗಾಬರಿಗೊಂಡು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.