ಚೆಟ್ಟಳ್ಳಿ, ಜೂ. 11: ಪ್ರಕೃತಿ ವಿಕೋಪದ ಕುರಿತು ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಮಂಗಳವಾರ ಚೆಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೊನ್ನತ್‍ಮೊಟ್ಟೆ, ಕೂಡ್ಲೂರು ಚೆಟ್ಟಳ್ಳಿ, ಈರಳೆವಳಮುಡಿ ಭಾಗದಲ್ಲಿ ಪರಿಶೀಲನೆ ನಡೆಸಿತು.

ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ತುತ್ತಾದ ಹಲವು ಗ್ರಾಮಗಳನ್ನು ಅತಿ ಸೂಕ್ಷ್ಮ ಹಾಗೂ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ.

ಗ್ರಾಮ ಪಂಚಾಯತಿ ವ್ಯಾಪ್ತಿಯ ಪೊನ್ನತ್ ಮೊಟ್ಟೆಯ 5ರಿಂದ 6 ಮನೆಯವರಿಗೆ ತಮ್ಮ ವಾಸ ಸ್ಥಳವನ್ನು ವರ್ಗಾಯಿಸಲು ಸೂಚನೆ ನೀಡಿದ್ದಾರೆ.

ಈ ಸಂದರ್ಭ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಂದೀಶ್, ಕಾರ್ಯದರ್ಶಿ ಮಂಜುಳಾ, ಗ್ರಾಮ ಪಂಚಾಯತಿ ಸದಸ್ಯರಾದ ರವಿ, ಸಿಬ್ಬಂದಿಗಳಾದ ಸಾಹಿರ, ಚಂದ್ರ, ಕಂದಸ್ವಾಮಿ ಇದ್ದರು.