ಕೂಡಿಗೆ, ಜೂ. 12: ವಿದ್ಯಾರ್ಥಿಗಳು ಪ್ರಾಮಾಣಿಕತೆಯ ಮನೋಭಾವದೊಂದಿಗೆ, ಮಾನ ವೀಯ ಗುಣಗಳನ್ನು ಮೈಗೂಡಿಸಿ ಕೊಂಡು ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಸಲಹೆಯಿತ್ತರು.
ಕೂಡಿಗೆ ಸೈನಿಕ ಶಾಲೆಯಲ್ಲಿ ನಡೆದ 2019-20ನೇ ಸಾಲಿನ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಆಂಗ್ಲಭಾಷೆಯು ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅತಿ ಅವಶ್ಯವಾಗಿದ್ದು, ಉತ್ತಮ ಆಂಗ್ಲಭಾಷಾ ಸಂವಹನ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು ಎಂದರು.
ಡಾ.ಸುಮನ್ ಡಿ ಪನ್ನೇಕರ್ ಅವರು ಶಾಲೆಯ ವಿವಿಧ ವಿಭಾಗಗಳ ನಾಯಕರಾಗಿ ಆಯ್ಕೆಯಾದ್ದ ವಿದ್ಯಾರ್ಥಿಗಳ ವಿವಿಧ ಹಂತದ ರ್ಯಾಂಕ್ ಬ್ಯಾಡ್ಜ್‍ಗಳನ್ನು ಅನಾವರಣ ಗೊಳಿಸುವದರ ಮೂಲಕ ಜವಾಬ್ದಾರಿ ಗಳನ್ನು ಹಸ್ತಾಂತರಿಸಲಾಯಿತು.
ಶಾಲೆಯ ವಿದ್ಯಾರ್ಥಿ ಕೆಡೆಟ್ ಹೆಮ್ ಹೊನ್ನಪ್ಪ ಶಾಲೆಯ ವಿದ್ಯಾರ್ಥಿಗಳ ನಾಯಕನಾಗಿ ನೇಮಕಗೊಂಡರೆ, ಶಾಲೆಯ ಶಿಸ್ತಿನ ನಾಯಕನಾಗಿ ಕೆಡೆಟ್ ದೀಪಾಂಶು ಸಿಂಗ್ ನೇಮಕಗೊಂಡರು. ಕೆಡೆಟ್ ದೀಪಾಂಶು ಸಿಂಗ್ ವಿವಿಧ ವಿಭಾಗಗಳ ಹಾಗೂ ವಿವಿಧ ನಿಲಯಗಳ ನಾಯಕರುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ಆರ್.ಆರ್ ಲಾಲ್, ಉಪಪ್ರಾಂಶು ಪಾಲರಾದ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿ ಆರ್ ಕೆ ಡೇ ಹಿರಿಯ ಶಿಕ್ಷಕರಾದ ಎಸ್.ಸೂರ್ಯ ನಾರಾಯಣ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ಕೆಡೆಟ್ ರಾಘವೇಂದ್ರ ಎಂ.ಕನ್ನಿ, ಸಿ.ಕೆಡೆಟ್ ಅಪೂರ್ವ, ಕೆಡೆಟ್ ಹರ್ಷ ನಿರ್ವಹಿಸಿದರು.