ಮಡಿಕೇರಿ, ಜೂ. 12: ಕೊಡಗು ಜಿಲ್ಲೆಯ ಸಮನ್ವಯ ವಿದ್ಯಾಕೇಂದ್ರ ಮರ್ಕಝುಲ್ ಹಿದಾಯ ಕೊಟ್ಟಮುಡಿ ಯುಎಇ ಸಮಿತಿಯ ಸಭೆ ಮತ್ತು ಇಫ್ತಿಯಾರ್ ಕೂಟ ದುಬೈ ವೇವ್ ಇಂಟರ್ ನ್ಯಾಷನಲ್ ಹೊಟೇಲ್‍ನಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಯುಎಇ ಸಮಿತಿ ಅಧ್ಯಕ್ಷ ಜಲೀಲ್ ನಿಝಾಮಿ ಎಮ್ಮೆಮಾಡು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರ್ಕಝುಲ್ ಹಿದಾಯ ಕೊಟ್ಟಮುಡಿ ಇದರ ಪ್ರಧಾನ ವ್ಯವಸ್ಥಾಪಕ ಇಸ್ಮಾಯಿಲ್ ಸಖಾಫಿ ಆಗಮಿಸಿದ್ದರು.

ಕೊಡಗು ಸುನ್ನಿ ವೆಲ್ಫೇರ್ ಯುಎಇ ಸಮಿತಿ ಅಧ್ಯಕ್ಷ ಅಬುಬಕ್ಕರ್ ಕೊಟ್ಟಮುಡಿ ಮತ್ತು ಸಲಹಾ ಸಮಿತಿ ಸದಸ್ಯರಾದ ಮಹಮ್ಮದ್ ಭಾಷಣ ಮಾಡಿದರು. ಯುಎಇ ಸಮಿತಿಯ ಪುನರ್‍ರಚನೆಯು ನಡೆಯಿತು.

ಸಲಹಾ ಸಮಿತಿಗೆ ಉಸ್ಮಾನ್ ನಾಪೋಕ್ಲು, ಮಹಮ್ಮದ್ ಕೊಂಡಗೇರಿ, ಹಮೀದ್ ನಾಪೋಕ್ಲು, ಅಬ್ದುಲ್ ಅಝೀಝ್ ಸಖಾಫಿ ನೇಮಕಗೊಂಡರು. ಅಧ್ಯಕ್ಷರಾಗಿ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು, ಪ್ರಧಾನ ಕಾರ್ಯದರ್ಶಿಯಾಗಿ ಅರಾಫತ್ ನಾಪೋಕ್ಲು, ಕೋಶಾಧಿಕಾರಿಯಾಗಿ ಅಬುಬಕ್ಕರ್ ಕೊಟ್ಟಮುಡಿ ಆಯ್ಕೆಗೊಂಡಿದ್ದಾರೆ.

ಉಪಾಧ್ಯಕ್ಷರುಗಳಾಗಿ ಅಹಮದ್ ಚಾಮಿಯಾಲ್, ಸಲೀಮ್ ಗುಂಡಿಗೆರೆ, ಆಲಿ ಎಮ್ಮೆಮಾಡು, ಸಹ ಕಾರ್ಯದರ್ಶಿಗಳಾಗಿ ಇಸ್ಮಾಯಿಲ್ ಮೂರ್ನಾಡು, ಮಸೂದ್ ಹಾಕತ್ತೂರು, ಇರ್ಷಾದ್ ಕೊಂಡಂಗೇರಿ ಹಾಗೂ ಸಮಿತಿ ಸದಸ್ಯರುಗಳಾಗಿ 17 ಮಂದಿ ನೇಮಕಗೊಂಡಿದ್ದಾರೆ.