ಮಡಿಕೇರಿ, ಜೂ. 12: ಸರಕಾರಿ ಪ್ರೌಢಶಾಲೆ ಕಾನ್ಬೈಲ್ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ಬೆಂಗಳೂರಿನ ಉದ್ಯೋಗಿಗಳಾಗಿರುವ ಮಂಜುನಾಥ್ ಹಾಗೂ ಸ್ನೇಹಿತರ ಬಳಗ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಮಂಜುನಾಥ್, ಶಿಕ್ಷಣ ಪಡೆಯಲು ಬಡತನ ಯಾವದೇ ಕಾರಣದಿಂದ ತೊಡಕಾಗಬಾರದು ಎಂದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ವಸಂತ್ಕುಮಾರ್, ಸ್ಥಳೀಯರಾದ ಕಿಟ್ಟಣ್ಣ, ಬಾಬು, ಶಾಲಾ ಮುಖ್ಯೋಪಾಧ್ಯಾಯ ಮಂಜೇಶ್, ಶಿಕ್ಷಕರಾದ ಸುಮಾ, ಲತಾ ವಿ. ಪೈ, ನವೀನ್ಕುಮಾರ್, ಪಾರ್ವತಿ, ಮಾಲಾದೇವಿ ಹಾಜರಿದ್ದರು.