ಸುಂಟಿಕೊಪ್ಪ, ಜೂ. 12: ಕೊಡಗು ಗೌಡ ನಿವೃತ್ತ ನೌಕರರ ಸಂಘ, ರೋಟರಿ ಮಿಸ್ಟಿ ಹಿಲ್ಸ್, ವಿನೋದ್ ಮೆಡಿಕಲ್, ಮಡಿಕೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಧತ್ವ ನಿಯಂತ್ರಣ ವಿಭಾಗ, ಉದಯ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಬೆಟ್ಟಗೇರಿ ಉದಯ ಪ್ರೌಢಶಾಲೆಯಲ್ಲಿ ನಡೆಯಿತು.
ಸ್ಮಿತಾ ಐ ಕೇರ್ ನೇತ್ರ ತಜ್ಞ ಡಾ. ಸಿ.ಆರ್. ಪ್ರಶಾಂತ್ ಹಾಗೂ ಸಹಾಯಕ ರಘು ಸಮಾರು 250 ಶಿಬಿರಾರ್ಥಿಗಳನ್ನು ಪರೀಕ್ಷಿಸಿ 98 ಮಂದಿಗೆ ಉಚಿತ ಔಷಧಿ ವಿತರಿಸಿದರು. 18 ಜನರಿಗೆ ಕಣ್ಣಿನ ಪೊರೆ ತೆಗೆಯಲು, 102 ಜನರಿಗೆ ಉಚಿತ ಕನ್ನಡಕಕ್ಕೆ ಶಿಪಾರಸು ಮಾಡಲಾಯಿತು.
ಅಧ್ಯಕ್ಷತೆಯನ್ನು ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೋರನ ಸಿ. ವಿಶ್ವನಾಥ್ ವಹಿಸಿದ್ದರು. ವೇದಿಕೆಯಲ್ಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎಂ.ಪಿ. ಕವಿತ, ಎಪಿಎಂಸಿ ಸದಸ್ಯ ಕೊಡಪಾಲು ಗಣಪತಿ, ವಿನೋದ್ ಮೆಡಿಕಲ್ಸ್‍ನ ಅಂಬೆಕಲ್ ಕುಶಾಲಪ್ಪ, ಮಾಜಿ ಮುಖ್ಯೋಪಾಧ್ಯಾಯ ಕೆದಂಬಾಡಿ ಪುಟ್ಟಯ್ಯ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಕಾರ್ಯದರ್ಶಿ ಬೈತಡ್ಕ ಬೆಳ್ಯಪ್ಪ, ಜಂಟಿ ಕಾರ್ಯದರ್ಶಿ ಕುದುಪಜೆ ಶಾರದಾ, ಖಜಾಂಚಿ ಪೊನ್ನಚನ ಜಿ. ಸೋಮಣ್ಣ, ನಿರ್ದೇಶಕರುಗಳಾದ ಪಟ್ಟಡ ಸಿ. ದೇವಯ್ಯ, ತಳೂರು ಕಾಳಪ್ಪ, ಕೂಡಕಂಡಿ ಉಮಾದೇವಿ, ಅತ್ತೇಡಿ ಕೃಷ್ಣಪ್ಪ ಹಾಜರಿದ್ದರು.