ಮಡಿಕೇರಿ, ಜೂ. 11: ಕಟ್ಟೆಪುರ ಗ್ರಾಮದ ಶಿವಣ್ಣ ಹಾಗೂ ಅವರೆದಾಳು ಗ್ರಾಮದ ಪಾಪಣ್ಣ ಅವರುಗಳು ತಮ್ಮ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಸೋಮವಾರ ಖಚಿತ ಮಾಹಿತಿಯನ್ನಾದರಿಸಿ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಸಿ.ಎಂ. ತಿಮ್ಮಶೆಟ್ಟಿ, ಸಿಬ್ಬಂದಿ ಗಳೊಂದಿಗೆ ದಾಳಿ ನಡೆಸಿ ಮದ್ಯವನ್ನು ವಶಪಡಿಸಿಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಎಎಸ್‍ಐ ಹೆಚ್.ಎಂ. ಗೋವಿಂದ್, ಸಿಬ್ಬಂದಿಗಳಾದ ಬೋಪಣ್ಣ, ಶಫೀರ್, ಶಶಿ ಪಾಲ್ಗೊಂಡಿದ್ದರು.