ಕರಿಕೆ, ಜೂ. 10: ಕೊಡಗಿನ ಗಡಿಭಾಗವಾದ ಕರಿಕೆಯಲ್ಲಿ ವಿಪರೀತ ಗಾಳಿ - ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾಗೂ ಆಸ್ತಿ ಪಾಸ್ತಿ ಹಾನಿಯಾಗುತ್ತಿದೆ. ಭಾಗಮಂಡಲ, ಕರಿಕೆ ಅಂತರ್ ರಾಜ್ಯ ಹೆದ್ದಾರಿಗೆ ಮರ ಉರುಳಿಬಿದ್ದ ಪರಿಣಾಮ ರಸ್ತೆ ಸಂಚಾರ ಕೂಡ ಸ್ಥಗಿತಗೊಂಡಿತ್ತು. ಕರಿಕೆ ಚೆತ್ತುಕಾಯ ನಿವಾಸಿ ಕೆ.ಡಿ.ಬಾಲಕೃಷ್ಣ ಎಂಬವರಿಗೆ ಸೇರಿದ ಬಾಳೆ ಗಿಡಗಳು ಗೊನೆ ಸಮೇತ ನೆಲಕಚ್ಚಿದ್ದು ಅಲ್ಲದೇ ಮನೆಯ ಮೇಲ್ಚಾವಣಿಯ ಶೀಟುಗಳು ಹಾರಿಹೋಗಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.ಕರಿಕೆ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ.
- ಸುಧೀರ್