ಮಡಿಕೇರಿ, ಜೂ. 8: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ತಾ. 10 ರಂದು ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ತಾ. 12 ರಂದು ವೀರಾಜಪೇಟೆ ತಾಲೂಕು ಪೊನ್ನಂಪೇಟೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ತಾ. 18 ರಂದು ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಾ. 20 ರಂದು ಮಡಿಕೇರಿ ತಾಲೂಕು ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ತಾ. 22 ರಂದು ವೀರಾಜಪೇಟೆ ತಾಲೂಕು ಸಿದ್ದಾಪುರ ಇಕ್ರಾ ಪದವಿಪೂರ್ವ ಕಾಲೇಜಿನಲ್ಲಿ, ತಾ. 25 ರಂದು ಸೋಮವಾರಪೇಟೆ ತಾಲೂಕು ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು, ತಾ. 27 ರಂದು ಸೋಮವಾರಪೇಟೆ ತಾ. ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜು ಮತ್ತು ತಾ. 29 ರಂದು ವೀರಾಜಪೇಟೆ ತಾ. ತಿತಿಮತಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಉದ್ಯೋಗ ನೋಂದಣಿ ಶಿಬಿರ ನಡೆಯಲಿದೆ.

ಎಸ್‍ಎಸ್‍ಎಲ್‍ಸಿ ಅನುತ್ತೀರ್ಣ, ಎಸ್‍ಎಸ್‍ಎಲ್‍ಸಿ, ಪಿಯುಸಿ, ಡಿಪ್ಲೋಮಾ ಮತ್ತು ಪದವಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಶಾಲೆಯಿಂದ ಪಡೆದ ವರ್ಗಾವಣೆ ಪ್ರಮಾಣ ಪತ್ರ (ಎಸ್‍ಎಸ್‍ಎಲ್‍ಸಿಯಲ್ಲಿ ಅನುತ್ತೀರ್ಣಗೊಂಡವರಿಗೆ ಮಾತ್ರ), ಎಸ್‍ಎಸ್‍ಎಲ್‍ಸಿ. ಮೂಲ ಅಂಕಪಟ್ಟಿ ಹಾಗೂ ನಕಲು ಪ್ರತಿ, ಪಿಯುಸಿ ಮೂಲ ಅಂಕಪಟ್ಟಿ ಹಾಗೂ ನಕಲು ಪ್ರತಿ (ಅನ್ವಯಿಸುವವರಿಗೆ) ಪದವಿಯ ಎಲ್ಲಾ ಸೆಮಿಸ್ಟರ್‍ಗಳ ಮೂಲ ಅಂಕಪಟ್ಟಿಗಳು ಹಾಗೂ ನಕಲು ಪ್ರತಿಗಳು (ಅನ್ವಯಿಸುವವರಿಗೆ), ಐಟಿಐ ಅಥವಾ ಡಿಪ್ಲೋಮಾ ಮೂಲ ಅಂಕಪಟ್ಟಿಗಳು ಹಾಗೂ ನಕಲುಪ್ರತಿಗಳು (ಅನ್ವಯಿಸುವವರಿಗೆ), ಜಾತಿ ದೃಢೀಕರಣ ಪತ್ರ (ಅನ್ವಯಿಸುವವರಿಗೆ), ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಈ ದಾಖಲಾತಿಗಳ ಮೂಲಪ್ರತಿ ಹಾಗೂ ನಕಲು ಪ್ರತಿಗಳೊಂದಿಗೆ ಶಿಬಿರ ನಡೆಯುವ ಸ್ಥಳದಲ್ಲಿ ಹಾಜರಿದ್ದು, ಉದ್ಯೋಗ ನೋಂದಣಿಯನ್ನು ಮಾಡಿಕೊಳ್ಳಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.