ಗೋಣಿಕೊಪ್ಪಲು, ಜೂ. 8: ಕೊಡಗು ಜಿಲ್ಲೆಯಲ್ಲಿನ ರೈತರ ಸಮಸ್ಯೆಗಳ ಬಗ್ಗೆ ಹೋರಾಟ ದಿಂದಲೇ ಸವಲತ್ತುಗಳನ್ನು ಪಡೆಯ ಬೇಕಾದ ಅನಿವಾರ್ಯತೆ ಬಂದೊದಗಿದೆ. ರೈತರು, ಬೆಳೆಗಾರರು ಒಗ್ಗಟ್ಟಿನಿಂದ ಹೋರಾಟದಲ್ಲಿ ಭಾಗಿಯಾಗಬೇಕೆಂದು ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಕರೆ ನೀಡಿದರು. ಕುಟ್ಟ ಕೊಡವ ಸಮಾಜ ಸಭಾಂಗಣದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ರೈತ ಸಂವಾದ ಹಾಗೂ ರೈತ ಸಂಘಕ್ಕೆ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ರೈತ ಪರ ಹೋರಾಟಗಳು ಯಶಸ್ವಿಯಾಗಿ ಜರುಗಿವೆ ಎಂದರು.
ರೈತ ಮುಖಂಡ ತಿತೀರ ಮಂದಣ್ಣ ಮಾತನಾಡಿ ರಾಜಕೀಯ ರಹಿತ ಹೋರಾಟದಿಂದ ಎಲ್ಲವನ್ನು ಪಡೆಯುವ ಅವಕಾಶವಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ರೈತರನ್ನು ಒಟ್ಟಾಗಿ ಸೇರಿಸಿ ಹೋರಾಟಕ್ಕೆ ಸಜ್ಜುಗೊಳಿಸುತ್ತಿರುವದು ಆಶಾದಾಯಕ ಬೆಳವಣಿಗೆ ಎಂದರು. ಮಾಚಿಮಾಡ ಮಾಣು ಸುಬ್ಬಯ್ಯ ಮಾತನಾಡಿ. ರೈತ ಸಂಘ ಯಶಸ್ಸು ಕಂಡಿದೆ ಎಂದು ತಿಳಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಸಂಘಟನೆಯಿಂದ ಹೊರ ಹಾಕಿದವರನ್ನು ಜಿಲ್ಲೆಗೆ ಕರೆಸಿ ಹೊಸ ಸಂಘಟನೆ ಕಟ್ಟಿ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಇದರ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖಂಡರು ಗಳಾದ ಅಶ್ವಥ್ ನಾರಾಯಣ ಅರಸ್. ಲೋಕೇಶ್ ರಾಜೇ ಅರಸ್, ಜಿಲ್ಲಾ ಉಪಾಧ್ಯಕ್ಷ ಶಂಕರಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಅಮ್ಮತ್ತಿ ಹೋಬಳಿ ಸಂಚಾಲಕ ಮಂಡೇಪಂಡ ಪ್ರವೀಣ್, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೇಮಾಡ ಮಂಜುನಾಥ್, ಚೆಪ್ಪುಡೀರ ಪಾರ್ಥ,ಮಚ್ಚಮಾಡ ಪ್ರಕಾಶ್, ತೀತಿರ ಸ್ವರೂಪ, ಚಿಣ್ಣಪ್ಪ, ಪ್ರತೀಶ್, ಅರುಣ್, ಕಭೀರ್, ಕುಶಾಲಪ್ಪ, ರಘು, ಕಳ್ಳಂಗಡ ಅಪ್ಪಣ್ಣ, ಸ್ವರೂಪ್, ಸೌರಬ್, ಹೊಟ್ಟೆಂಗಡ ಪ್ರಕಾಶ್, ಕೊಂಗಂಡ ಸುರೇಶ್, ಮಚ್ಚಮಾಡ ಸುಬ್ರಮಣಿ, ಶರ್ಮಿನ್, ಮಾಚಿಮಾಡ ರಾಜ, ಕೋಟ್ರಂಗಡ ಅಪ್ಪಣ, ಕಳ್ಳಿಚಂಡ ರತ್ನ, ಚೆಪ್ಪುಡೀರ ಬೋಪಣ್ಣ, ಮುಕ್ಕಾಟೀರ ಕಿಶಾನ್, ಚೆಕ್ಕೇರ ರಾಬೀನ್, ಕೌಶಿಕ್, ಶ್ರೀಮಂಗಲ, ಹೋಬಳಿ ಸಂಚಾಲಕ ಬಾಚಮಾಡ ಭವಿಕುಮಾರ್, ಚೋನಿರ ಸತ್ಯ ಮುಂತಾದವರು ಹಾಜರಿದ್ದರು.
- ಹೆಚ್.ಕೆ.ಜಗದೀಶ್