ಮಡಿಕೇರಿ, ಜೂ. 8: ಪ್ರಸಕ್ತ (2019-20) ಸಾಲಿನಲ್ಲಿ ತಾ. 21 ರಂದು ನಡೆಯುವ 5ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ತಾ. 10 ರಿಂದ 21 ರವರೆಗೆ ಉಚಿತ ಯೋಗ ಶಿಬಿರ ನಡೆಯಲಿದೆ.

ಯೋಗ ಶಿಬಿರ ನಡೆಯುವ ಕೇಂದ್ರಗಳ ವಿವರ, ಮೊಬೈಲ್ ಸಂಖ್ಯೆ: ಭಾರತೀಯ ವಿದ್ಯಾಭವನ ಶ್ರೀ ಓಂಕಾರೇಶ್ವರ ದೇವಾಲಯದ ಬಳಿ 9480731020, 7760038574, ಪಥಂಜಲಿ ಯೋಗ ಶಿಕ್ಷಣ ಸಮಿತಿ, ಬಾಲಭವನ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ 9945987828, ಅಶ್ವಿನಿ ಯೋಗ ಕೇಂದ್ರ, ಅಶ್ವಿನಿ ಆಸ್ಪತ್ರೆ, ಮಡಿಕೇರಿ 9448530363, ಶ್ರೀ ಚೌಡೇಶ್ವರಿ ದೇವಸ್ಥಾನ ಮಹದೇವಪೇಟೆ, ಮಡಿಕೇರಿ 9449779823, ಬಸಪ್ಪ ಶಿಶುವಿಹಾರ, ದಾಸವಾಳ ರಸ್ತೆ, ಮಡಿಕೇರಿ 9980607059, ಗೌಡ ಸಮಾಜ, ಸುಬೇದಾರ್ ಅಪ್ಪಯ್ಯಗೌಡ ರಸ್ತೆ, ಮಡಿಕೇರಿ, ಮೈತ್ರಿಹಾಲ್, ಮಡಿಕೇರಿ 9448367264 ಇಲ್ಲಿ ಯೋಗ ಶಿಬಿರ ನಡೆಯಲಿದೆ.

ಹಾಗೆಯೇ ತಾ. 18 ರಂದು ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ನಗರದ ಕೋಟೆ ಸಭಾಂಗಣದಲ್ಲಿ ಸೇರಿ ಪ್ರಮುಖ ಬೀದಿಗಳಲ್ಲಿ ಯೋಗ ಜಾಥಾ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಪೂರ್ವ ತಯಾರಿಯ ಯೋಗ ಪ್ರದರ್ಶನವನ್ನು ಮೈತ್ರಿ ಹಾಲ್‍ನಲ್ಲಿ ಒಂದು ದಿವಸ ಮುಂಚಿತವಾಗಿ ಸಂಜೆ 6 ಗಂಟೆಗೆ ನಡೆಸಲಾಗುವದು ಎಂದು ಜಿಲ್ಲಾ ಆಯುಷ್ ಅಧಿಕಾರಿ ತಿಳಿಸಿದ್ದಾರೆ.