ಮಡಿಕೇರಿ, ಜೂ. 6: ಪಾರಸ್ ಪೃಥ್ವಿ ಜ್ಯುವೆಲ್ಸ್ ವತಿಯಿಂದ ಕುಶಾಲನಗರ ಶಾಖೆಯಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಕಮಲ ಕಾರ್ಯಪ್ಪ, ಫಾತಿಮ ಶಿಕ್ಷಣ ಸಂಸ್ಥೆ ಪ್ರಾಂಶುಪಾಲೆ ಶ್ರೀಮತಿ ಡಿಸೋಜ, ಬಸವನಹಳ್ಳಿ ಸರಕಾರಿ ಶಾಲೆಯ ಪ್ರಾಂಶುಪಾಲ ಶ್ರೀನಿವಾಸ್ ಇವರುಗಳು ಸ್ಮರಣಿಕೆ, ಸನ್ಮಾನ ಪತ್ರ ನೀಡಿ ಪುರಸ್ಕರಿಸಿದರು. ಎಸ್.ಎಸ್.ಎಲ್.ಸಿ.ಯಲ್ಲಿ ಅಧಿಕ ಅಂಕ ಗಳಿಸಿದ ಸ್ಫೂರ್ತಿ, ನೀನಿತ ಕ್ರಸ್ಟ, ಯಶ್‍ಮೀತ, ತೀರ್ಥೆಶ್, ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಚಾಂದಿನಿ, ಶ್ರೇಯಸ್‍ಭಟ್, ಕಲಾ ವಿಭಾಗದಲ್ಲಿ ಸಂಜಯ, ವಾಣಿಜ್ಯ ವಿಭಾಗದಲ್ಲಿ ಮೌಲ್ಯ ಮತ್ತು ಹರ್ಷಿತ ಇವರುಗಳನ್ನು ಸನ್ಮಾನಿಸಲಾಯಿತು.