*ಗೋಣಿಕೊಪ್ಪಲು, ಜೂ. 6: ಪರಿಸರ ದಿನಾಚರಣೆ ಅಂಗವಾಗಿ ತಿತಿಮತಿ ‘ಕ್ಲೀನ್ ಕೂರ್ಗ್’ ವತಿಯಿಂದ ತಿತಿಮತಿ ಪಟ್ಟಣದಲ್ಲಿ ಸ್ವಚ್ಛ ಭಾರತ ಅಭಿಯಾನ ನಡೆಸಿದರು.

ಸುಮಾರು 50ಕ್ಕೂ ಹೆಚ್ಚು ಯುವಕರ ತಂಡ ಕ್ಲೀನ್ ಕೂರ್ಗ್ ಅಧ್ಯಕ್ಷ ಕಾಜಲ್ ನೇತೃತ್ವದಲ್ಲಿ ಪಟ್ಟಣದ ರಸ್ತೆಯ ಎರಡು ಬದಿಗಳು ಹಾಗೂ ಚರಂಡಿಗಳನ್ನು ಕರಡಿಕೊಪ್ಪ ಮಾರ್ಗದುದ್ದಕ್ಕೂ ಗಿಡ ಗಂಟಿಗಳನ್ನು ಕಡಿದು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸಿದರು.

ಈ ಸಂದರ್ಭ ಪಟ್ಟಣದಲ್ಲಿ ಯಾವದೇ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯದಂತೆ ಜನಜಾಗೃತಿ ಮೂಡಿಸಲಾಯಿತು. ಕಸಗಳನ್ನು ಕೆಲವು ಸಂಘ ಸಂಸ್ಥೆಗಳು ಅಳವಡಿಸಿರುವ ಕಸದ ತೊಟ್ಟಿಗಳಲ್ಲಿ ಹಾಕುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜನರಿಗೆ ಮನವರಿಕೆ ಮಾಡಿಸಿದರು.