ಗೋಣಿಕೊಪ್ಪ ವರದಿ, ಜೂ. 6: ಮಗುವನ್ನು ಕೆಟ್ಟ ಚಟಗಳಿಗೆ ಒಳಗಾಗದಂತೆ ನೋಡಿಕೊಳ್ಳುವಲ್ಲಿ ಪೋಷಕರ ಜವಾಬ್ದಾರಿ ಹೆಚ್ಚಿದೆ ಎಂದು ವೀರಾಜಪೇಟೆ ತಾಲೂಕು ಅರೋಗ್ಯ ಅಧಿಕಾರಿ ಡಾ. ಯತಿರಾಜ್ ಹೇಳಿದರು.

ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಕಳತ್ಮಾಡು ಲಯನ್ಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಶ್ವ ತಂಬಾಕು ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಈ ಸಂದರ್ಭ ತಂಬಾಕು ಬಳಕೆಯಿಂದಾಗುತ್ತಿರುವ ತೊಂದರೆ, ಮುಂಜಾಗ್ರತೆ, ಸಾರ್ವಜನಿಕ ಕಳಕಳಿ, ದುಷ್ಪರಿಣಾಮ ಬಗ್ಗೆ ವಿದ್ಯಾರ್ಥಿಗಳು ವೈದ್ಯರೊಂದಿಗೆ ಚರ್ಚೆ ನಡೆಸಿ, ಪರಿಹಾರ ಕಂಡುಕೊಂಡರು. ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷೆ ಕೊಣಿಯಂಡ ಕಾವ್ಯ ಸಂಜು, ಕಾರ್ಯದರ್ಶಿ ಕೊಟ್ಟಂಗಡ ನಾಣಯ್ಯ, ಪ್ರಾಂಶುಪಾಲ ಕೆ. ಸಿ. ಪವಿತ್ರ, ಸದಸ್ಯರುಗಳಾದ ರಾಬಿನ್ ಸುಬ್ಬಯ್ಯ, ಎಂ. ಕೆ. ಪೂಣಚ್ಚ ಹಾಗೂ ಜೆಸಿರೆಟ್ ಅಧ್ಯಕ್ಷೆ ತೇಜಲ್ ಉಪಸ್ಥಿತರಿದ್ದರು.