ಮಡಿಕೇರಿ, ಜೂ. 6: ಇನ್ನೇನು ಮುಂಗಾರು ಮಳೆ ಜಿಲ್ಲೆಯನ್ನು ಪ್ರವೇಶಿಸುವ ಕಾಲ ಸನ್ನಿಹಿತವಾಗಿದೆ. “ಧೋ” ಎಂದು ಸುರಿಯತ್ತ ಬರುವ ಮಳೆ ಸಂದರ್ಭ ಮಂಜಿನ ನಗರಿ ಮಡಿಕೇರಿಯಲ್ಲಿ ಕಾಮಗಾರಿ ನಡೆಸಲು ಅಸಾಧ್ಯ. ಆದರೆ, ಮಳೆಗಾಲ ಸನ್ನಿಹಿತವಾದಾಗಲೇ ನಗರಸಭೆಗೆ ಕಾಮಗಾರಿ ನಡೆಸಲು ಎಚ್ಚರವಾಗುವದು! ಈಗಷ್ಟೇ ನಗರಸಭೆಯಿಂದ ನೂತನ ಖಾಸಗಿ ಬಸ್À ನಿಲ್ದಾಣ ಬಳಿ ತೋಡು ದುರಸ್ತಿ, ತಡೆÀಗೋಡೆ ನಿರ್ಮಾಣ ನಡೆಯುತ್ತಿದೆ. ಅಲ್ಲಿ ತೆಗೆದ ಮಣ್ಣನ್ನು ತಂದು, ಹಾಕಿ ಸ್ಟೇಡಿಯಂನ ಮುಂಭಾಗದ ರಸ್ತೆ ಬದಿಯಲ್ಲಿ ರಾಶಿ ಹಾಕಲಾಗಿದೆ. ಈ ನಡುವೆ, ಕೋಟಿಗಟ್ಟಲೆ ಹಣ ಮಂಜೂರಾಗಿ ತೀರಾ ಕಳಪೆ ಕಾಮಗಾರಿಯೊಂದಿಗೆ ರಸ್ತೆಗಳನ್ನೆಲ್ಲ ಅಗೆದು, ಬಗೆದು ಹಾಳು ಮಾಡಿರುವ ಯು.ಜಿ.ಡಿ ಕಾಮಗಾರಿಯ ದುರಂತ ಎದುರಾಗುತ್ತದೆ. ರಸ್ತೆ ಬದಿಯಲ್ಲಿ ಕಳೆದ ಒಂದು ವರ್ಷದಿಂದಲೇ ತಂದು ಎಸೆದಿರುವ ಸಿಮೆಂಟ್ ಪೈಪ್‍ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ನಗರಸಭೆಯ ಕಾಮಗಾರಿ ಸಂದರ್ಭ ರಾಶಿ ಹಾಕಿರುವ ಮಣ್ಣು, ಜೊತೆಗೆ ಅಲ್ಲಲ್ಲಿ ಎಸೆಯಲ್ಪಟ್ಟಿರುವ ಯ.ಜಿ.ಡಿ ಕಾಮಗಾರಿಯ ಪೈಪ್‍ಗಳು ಬಿದ್ದು ರಸ್ತೆಯೇ ಮುಚ್ಚಿಹೋಗುತ್ತಿದೆ. ದಿನವೂ ಮಣ್ಣು ಜರಿಯುತ್ತಿದೆ. ಇತ್ತ ರಸ್ತೆಗೆ, ಅತ್ತ ತೋಡಿಗೆ ಮಣ್ಣು ಜರಿಯುತ್ತಿದ್ದು ತೋಡು ಕೂಡ ಮುಚ್ಚಲ್ಪಡಲಿದೆ. ರಸ್ತೆಯಂತೂ ಕೇವಲ ಒಂದು ವಾಹನ ಮಾತ್ರ ಸಂಚರಿಸುವಷ್ಟು ಕಿರಿದಾಗುತ್ತ ಬರುತ್ತಿದೆ. ಅಲ್ಲಿ ರಸ್ತೆಗಿಂತ ಗುಂಡಿಗಳೇ ಅಧಿಕವಾಗಿದ್ದು ಮಳೆಗಾಲದಲ್ಲಿ ಈ ರಸ್ತೆಯಲ್ಲಿ ನಡೆÀಯುವ ಪಾದಚಾರಿಗಳು, ಅದರಲ್ಲೂ ಮುಖ್ಯವಾಗಿ ತೆರಳುವ ಕಾಲೇಜು ವಿದ್ಯಾರ್ಥಿಗಳ ಸ್ಥಿತಿ ಶೋಚನೀಯವಾಗಬಲ್ಲುದು. ಕಿರಿದಾದ ಈ ರಸ್ತೆಯಲ್ಲಿ ಪಾದಚಾರಿ ಗಳಿಗೆ ನಡೆಯಲೂ ಅಸಾಧ್ಯ. ಇತ್ತ ಗುಂಡಿಗಳಲ್ಲಿ ಸಂಚರಿಸುವ ವಾಹನಗಳ ಕೆಸರೆರಚಾಟವೂ ಸೇರಿದÀರೆ ಪಾದಚಾರಿಗಳು ಕೆಸರು ವರ್ಣದ ವಸ್ತ್ರಧಾರಿಗಳಾಗಿ ಮಾರ್ಪಡುವದಂತೂ ಖಚಿತ!
ಛೆ., ಎಲ್ಲಿದೆ ಆಡಳಿತ, ನಗರ ಸಭಾ ಸಮಿತಿ ಇದ್ದಾಗಲೂ ಈ ಬಗ್ಗೆ ಕಾಳಜಿ ವಹಿಸಲಿಲ್ಲ, ಈಗಲೂ ಕೇಳು ವವರಿಲ್ಲದೆ
(ಮೊದಲ ಪುಟದಿಂದ) ಯಥಾಸ್ಥಿತಿ ಮುಂದುವರಿದಿದೆ. ಯು.ಜಿ.ಡಿಯವರನ್ನು ಕೇಳುವಂತಹ ಧೈರ್ಯವುಳ್ಳ ಜನಪ್ರತಿನಿಧಿಗಳೂ ನಮ್ಮಲ್ಲಿಲ್ಲ. ಈ ನಡುವೆ, ಮಡಿಕೇರಿ ನಗರಸಭಾ ಆಯುಕ್ತ ಎಂ ಎಲ್. ರಮೇಶ್ ಅವರನ್ನು “ಶಕ್ತಿ” ಪ್ರಶ್ನಿಸಿದಾಗ ಸದ್ಯದಲ್ಲಿಯೇ ಈ ದಾರಿ ಬದಿಯ ಮಣ್ಣನ್ನೆಲ್ಲ್ಲ ತೆಗೆಸುವದಾಗಿ ತಿಳಿಸಿದರು.
ಆದರೆ, ‘‘ಶಕ್ತಿ”ಗೆ ತಿಳಿದುಬಂದಂತೆ ಈಗ ನಡೆಯತ್ತಿರುವ ತಡೆಗೋಡೆ ಕೆಲಸ ಹಾಗೂ ತೋಡಿನ ದುರಸ್ತಿ ಕೆಲಸ ಮುಗಿದ ಬಳಿಕÀ ಕಣಿವೆಯಂತಾಗಿರುವ ಹಳ್ಳ ಪ್ರದೇಶಕ್ಕೇ ಈ ಮಣ್ಣನ್ನು ಹಾಕಲು ಕಾಯ್ದಿರಿಸಲಾಗಿದೆಯಂತೆ. ಆದರೆ, ಈ ಕಾಮಗಾರಿ ಮುಗಿಯುವ ವೇಳೆ, ಬೀಳುವ ಭಾರಿ ಮಳೆಯಲ್ಲಿ ಮಣ್ಣೆಲ್ಲ ಕೊಚ್ಚಿ ಹೋಗಿ ಒಂದೆಡೆ ರಸ್ತೆಗೆ ಇನ್ನೊಂದೆಡೆ ತೋಡು ಸೇರುವ ಸಾಧ್ಯತೆಯೇ ಹೆಚ್ಚು. ಕೆಸರು ಕೊಂಪೆ ಜೊತೆಗೆ ಸುತ್ತಲೂ ಬೆಳೆದಿರುವ ಕಾಡನ್ನು ಕೂಡ ನಗರಸಭೆ ಮುಂಜಾಗರೂಕ ಕ್ರಮವಾಗಿ ಈ ವರ್ಷ ಕಡಿಸದಿರುವದರಿಂದ ಕೆಸರು, ಕೊಂಪೆ ಹಾಗೂ ಗಿಡ ಗಂಟಿಗಳ ಮಧ್ಯೆ ಕಾಡಿನ ನಡುವೆ ಆದಿ ಮಾನವ ನಡೆÀದಂತೆ ಮಡಿಕೇರಿಯ ನಾಗರಿಕರು ಸಾಗಬೇಕಾದ ಅನಿವಾರ್ಯತೆಯಿದೆ. ಇದು ಸರಕಾರೀ ವ್ಯವಸ್ಥೆಯ ಆಡಳಿತಕ್ಕೆ ಹಿಡಿದ ಕೈಗನ್ನಡಿ!
- ವರದಿ: ‘‘ಚಕ್ರವರ್ತಿ” ಚಿತ್ರ: ಲಕ್ಷ್ಮೀಶ್