ಸುಂಟಿಕೊಪ್ಪ, ಜೂ. 6: ಕಾನ್‍ಬೈಲ್ ಶಾಲೆಯ ಹಳೆಯ ವಿದ್ಯಾರ್ಥಿ ಮಂಜು ಎಂಬವರು ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿದರು. ಕಾನ್‍ಬೈಲ್ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಾಲಾ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ನೋಟು ಪುಸ್ತಕಗಳನ್ನು ಶಾಲೆಯ ಹಳೆಯ ವಿದ್ಯಾರ್ಥಿ ಮಂಜು ವಿದ್ಯಾರ್ಜನೆ ಮಾಡಿದ ಶಾಲೆಯ ಮೇಲಿನ ಅಭಿಮಾನದಿಂದ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕವನ್ನು ವಿತರಿಸಿ ಮಕ್ಕಳ ಶಿಕ್ಷಣಕ್ಕೆ ಕೊಡುಗೆಯನ್ನು ನೀಡಿದರು.

ನಾಕೂರು ಶಿರಂಗಾಲ ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ ಬಸವರಾಜ್ ಮಾತನಾಡಿ ಮಕ್ಕಳ ವಿದ್ಯಾಭ್ಯಾಸ ಸಹಾಯಹಸ್ತ ನೀಡುವ ವಿಶಾಲ ಮನೋಭಾವನೆಯಾಗಿದೆ. ವಿದ್ಯಾರ್ಥಿಗಳು ಇವರು ನೀಡಿರುವ ಸಹಕಾರವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಶಿಕ್ಷಣಪಡೆದು ದೇಶದ ಸತ್‍ಪ್ರಜೆಗಳಾಬೇಕೆಂದು ಕಿವಿಮಾತು ಹೇಳಿದರು.

ಈ ಸಂದರ್ಭ ನಾಕೂರು ಶಿರಂಗಾಲ ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ ಬಸವರಾಜ್, ಗ್ರಾ.ಪಂ.ಸದಸ್ಯರಾದ ಕೆ.ಪಿ.ವಸಂತ್, ಗ್ರಾಮಸ್ಥರಾದ ಬಾಬು ರೈ,ಕಿಟ್ಟಣ ರೈ, ಶಾಲಾ ಮುಖ್ಯೋಪಾದ್ಯಾಯರಾದ ಎಂ.ಎಸ್. ಚೆನ್ನಪ್ಪ, ಸಹ ಶಿಕ್ಷಕರಾದ ಭಾಗ್ಯಜ್ಯೋತಿ, ವಾಣಿ, ಚಂದ್ರವತಿ,ಶಾಂತಿ ಇದ್ದರು. ಇದೇ ಸಂದರ್ಭ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕವನ್ನು ವಿತರಿಸಲಾಯಿತು.