ಗೋಣಿಕೊಪ್ಪ ವರದಿ, ಜೂ. 6 : 25 ವರ್ಷ ಪೂರೈಸಿದ ಹಿನ್ನೆಲೆ, ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿ ತಾ. 8 ಮತ್ತು 9 ರಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಬೊಳ್ಳಿನಮ್ಮೆ ಸಿದ್ದತೆ ಪೂರ್ಣಗೊಂಡಿದ್ದು, ಹಲವು ಕಾರ್ಯ ಕ್ರಮಗಳ ಮೂಲಕ ಮೆರಗು ನೀಡಲಿದೆ. ವೇದಿಕೆ ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದ್ದು, ಎರಡು ದ್ವಾರಗಳು ಜನರನ್ನು ಸೆಳೆಯುತ್ತಿವೆ. ಬೊಳ್ಳಿನಮ್ಮೆ ಕಾರ್ಯಕ್ರಮ ನಡೆಯುವ ವೇದಿಕೆಗೆ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಹೆಸರಿಡಲಾಗಿದೆ. 2 ಕಟ್ಟೊಳೆಗಳನ್ನು ನಿರ್ಮಿಸಲಾಗಿದೆ. ಕಾಲೇಜು ಆವರಣ ಪ್ರವೇಶ ದ್ವಾರದಲ್ಲಿ ಹಿರಿಯ ಸಂಗೀತಗಾರ ಕೂರ್ಗ್ಸ್ಟಾರ್ ಚೆಕ್ಕೇರ ಅಪ್ಪಯ್ಯ ದ್ವಾರ ಸ್ಥಾಪಿಸಲಾಗಿದೆ. ಪಟ್ಟಣದ ಪೊನ್ನಂಪೇಟೆ ರಸ್ತೆ ಜಂಕ್ಷನ್ನಲ್ಲಿ ಹಿರಿಯ ಸಾಹಿತಿ ನಡಿಕೇರಿಯಂಡ ಚಿಣ್ಣಪ್ಪ ಕಟ್ಟೊಳೆ ಸ್ಥಾಪಿಸಲಾಗಿದೆ. ಸುಮಾರು 1500 ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಸುಮಾರು 7 ಲಕ್ಷ ಅನುದಾನದಲ್ಲಿ ಕಾರ್ಯಕ್ರಮ ನಡೆಯಲಿದೆ.ಈಗಾಗಲೇ ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಬಿಂಬಿಸುವ ಮೂಲಕ ಜಿಲ್ಲೆಯ ಉದ್ದಗಲಕ್ಕೂ ಪ್ರಚಾರ ರಥಯಾತ್ರೆ ನಡೆಸಲಾಗಿದೆ. ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿರುವ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕೊಡವ ಜಾನಪದ ಸಾಂಸ್ಕøತಿಕ ಮೆರವಣಿಗೆ, ಸಾಂಸ್ಕøತಿಕ ಪ್ರದರ್ಶನ, ವಿಚಾರಗೋಷ್ಠಿ, ಕೊಡವ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ.
ತಾ. 8 ರಂದು ಬೆ. 9 ಗಂಟೆಗೆ ಪಾಲಿಬೆಟ್ಟ ರಸ್ತೆ ಜಂಕ್ಷನ್ನಿಂದ ಕೊಡವ ಜಾನಪದ ಸಾಂಸ್ಕøತಿಕ ಮೆರವಣಿಗೆ ಆರಂಭಗೊಳ್ಳಲಿದೆ. ಮೆರವಣಿಗೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ್ ಉದ್ಘಾಟಿಸಲಿದ್ದಾರೆ. ಸಾಂಸ್ಕøತಿಕ ಪ್ರದರ್ಶನವನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪುಸ್ತಕ ಮತ್ತು ವಸ್ತು ಪ್ರದರ್ಶನವನ್ನು ಜಿ.ಪಂ. ಸಿಇಒ ಕೆ. ಲಕ್ಷ್ಮಿಪ್ರಿಯಾ ಉದ್ಘಾಟಿಸಲಿದ್ದಾರೆ.
ಕೊಡವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಚಂಡೆಮೇಳ, ಕಾಪಳಕಳಿ, ಉಮ್ಮತ್ತಾಟ್, ಕೋಲಾಟ್, ಪರೆಯಕಳಿ, ದುಡಿಕೊಟ್ಟ್ ಪಾಟ್, ತಾಲಿಪಾಟ್, ಉರ್ಟಿಕೊಟ್ಟ್ ಆಟ್, ಕತ್ತಿಯಾಟ್, ಬಾಳೋಪಾಟ್ ನಡೆಯಲಿದೆ.
ಮುಖ್ಯಮಂತ್ರಿ ಆಗಮನ ನಿರೀಕ್ಷೆ: ಬೆ. 10.30ಕ್ಕೆ
(ಮೊದಲ ಪುಟದಿಂದ) ಸಭಾ ಕಾರ್ಯಕ್ರಮ ಉದ್ಘಾಟನೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ನೆರವೇರಿಸುವ ನಿರೀಕ್ಷೆ ಇದೆ. ಈ ಸಂಧರ್ಭ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪಮೊಯ್ಲಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ, ಎಂಎಲ್ಸಿ ಸುನಿಲ್ ಸುಬ್ರಮಣಿ, ತಾ.ಪಂ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಸಂಜೆ 5 ಗಂಟೆಗೆ ಯಂಗ ಕಲಾರಂಗದಿಂದ ಕುರ್ಕಂಗ ನಾಟಕ ಪ್ರದರ್ಶನ, ಚೇಂದೀರ ನಿರ್ಮಲಾ ಬೋಪಣ್ಣ ತಂಡದಿಂದ ಕೊಡವ ಆರ್ಕೆಸ್ಟ್ರಾ ನಡೆಯಲಿದೆ.
ತಾ. 9 ರಂದು ಬೆಳಗ್ಗೆ 9 ಕ್ಕೆ ವಿಚಾರಗೋಷ್ಠಿ ಪ್ರೊ. ಇಟ್ಟೀರ ಕೆ. ಬಿದ್ದಪ್ಪ ಅಧ್ಯಕ್ಷತೆ ನಡೆಯಲಿದೆ. ಪೆರಿಯಂಡ ಜಯಂತಿ ಅವರಿಂದ ಕೊಡವ ಭಾಷೆಯನ್ನು 8 ನೇ ಪರಿಚ್ಚೇಧಕ್ಕೆ ಸೇರಿಸುವ ಬಗ್ಗೆ ವಿಚಾರಗೋಷ್ಠಿ, ಕೊಡವ ಭಾಷಿಗರ ನಮ್ಮೆ-ನಾಳ್ ಬಗ್ಗೆ ತೇಲಪಂಡ ಕವನ್ ಕಾರ್ಯಪ್ಪ ವಿಚಾರ ಮಂಡನೆ ಮಾಡಲಿದ್ದಾರೆ.
ಬೆ. 11 ಕ್ಕೆ ನಡೆಯಲಿರುವ ಕೊಡವ ಕವಿಗೋಷ್ಠಿಯಲ್ಲಿ ಸಾಹಿತಿ ಚಾಮೇರ ದಿನೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಚಂಗಚಂಡ ರಶ್ಮಿ ನಿತಿನ್, ಚಮ್ಮಣಮಾಡ ವಾಣಿ ರಾಘವೇಂದ್ರ, ಚಂಗುಲಂಡ ಈಶ, ನಿವ್ಯ ದೇವಯ್ಯ, ಕೋಟೇರ ಉದಯ್, ಅಪ್ಪಚೆಟ್ಟೋಳಂಡ ವನು ವಸಂತ್, ಅಂಜಪರವಂಡ ರಂಜು, ಸುಳ್ಳಿಮಾಡ ಶಿಲ್ಪ, ಕಳ್ಳಿಚಂಡ ದೀನಾ, ರಜಿತ್ ಕಾರ್ಯಪ್ಪ, ಬಟ್ಟಕಾಳಂಡ ಮುತ್ತಣ್ಣ ಕವನ ವಾಚಿಸಲಿದ್ದಾರೆ. ಮಧ್ಯಾಹ್ನ 2 ಕ್ಕೆ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಸಾಹಿತ್ಯಾ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಡಾ. ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ, ನಾಟಕ ಕ್ಷೇತ್ರದಲ್ಲಿ ಕೋಳೇರ ಸನ್ನು ಕಾವೇರಪ್ಪ, ಜಾನಪದ ಕ್ಷೇತ್ರದಲ್ಲಿ ನಾಳಿಯಮ್ಮಂಡ ಕೆ. ಅಚ್ಚಮಯ್ಯ ಅವರುಗಳು ಗೌರವ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಈ ಸಂದರ್ಭ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಡಿ. ಕೆ. ಶಿವಕುಮಾರ್, ಕೊಡವ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ, ಶಾಸಕರುಗಳಾದ, ಅಪ್ಪಚ್ಚುರಂಜನ್, ವೀಣಾ ಅಚ್ಚಯ್ಯ, ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷರುಗಳಾದ ಡಾ. ಉಳ್ಳಿಯಡ ಎಂ. ಪೂವಯ್ಯ, ಬಾಚರಣಿಯಂಡ ಪಿ. ಅಪ್ಪಣ್ಣ, ಚಿರಿಯಪಂಡ ರಾಜಾ ನಂಜಪ್ಪ, ಉಳ್ಳಿಯಡ ಡಾಟಿ ಪೂವಯ್ಯ, ಐಮುಡಿಯಂಡ ರಾಣಿ ಮಾಚಯ್ಯ, ಅಡ್ಡಂಡ ಸಿ. ಕಾರ್ಯಪ್ಪ, ಬಿದ್ದಾಟಂಡ ಎಸ್. ತಮ್ಮಯ್ಯ ಪಾಲ್ಗೊಳ್ಳಲಿದ್ದಾರೆ.