ಸಿದ್ದಾಪುರ, ಜೂ. 6: ಸಮಸ್ತ ಕೇರಳ ಇಸ್ಲಾಂ ಧಾರ್ಮಿಕ ವಿದ್ಯಾಭ್ಯಾಸ ಪರೀಕ್ಷಾ ಮಂಡಳಿಯ ಅಧೀನದಲ್ಲಿ ನಡೆದ ಈ ಸಾಲಿನ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆ ಉತ್ತಮ ಸಾಧನೆ ಮಾಡಿದೆ.

5ನೇ ತರಗತಿಯ ಪರೀಕ್ಷೆಯಲ್ಲಿ ಪರೀಕ್ಷೆ ಬರೆದ 549 ವಿದ್ಯಾರ್ಥಿಗಳ ಪೈಕಿ 513 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 7ನೇ ತರಗತಿಯ ಪರೀಕ್ಷೆಯಲ್ಲಿ 357 ವಿದ್ಯಾರ್ಥಿಗಳ ಪೈಕಿ 344 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 10ನೇ ತರಗತಿಯಲ್ಲಿ 198 ವಿದ್ಯಾರ್ಥಿಗಳ ಪೈಕಿ 196 ವಿದ್ಯಾರ್ಥಿಗಳು ಹಾಗೂ ಪ್ಲಸ್ ಟು ತರಗತಿಯಲ್ಲಿ 45 ವಿದ್ಯಾರ್ಥಿಗಳಲ್ಲಿ 45 ಮಂದಿ ಉತ್ತೀರ್ಣರಾಗಿದ್ದಾರೆ.

ಒಟ್ಟಾರೆ ಜಿಲ್ಲೆಗೆ ಶೇ. 95.56 ಫಲಿತಾಂಶ ಲಭಿಸಿದೆ. 5ನೇ ತರಗತಿಯಲ್ಲಿ ಸಿದ್ದಾಪುರದ ಮುನವ್ವಿರುಲ್ ಇಸ್ಲಾಂ ಮದರಸದ ವಿದ್ಯಾರ್ಥಿನಿ ಫಾತೀಮಾ ಝಿಯಾ ಕೆ.ಎ, 7ನೇ ತರಗತಿಯಲ್ಲಿ ನೆಲ್ಲಿಹುದಿಕೇರಿಯ ದಾರುಲ್ ಹುದಾ ಮದ್ರಸದ ಮಹಮ್ಮದ್ ಮರ್ಷದ್, 10ನೇ ತರಗತಿಯಲ್ಲಿ ನೆಲ್ಲಿಹುದಿಕೇರಿಯ ದಾರುಸ್ಸಲಾಂ ಮದ್ರಸದ ಶಾರಿಕಾ ಎ.ವೈ ಹಾಗೂ ಪ್ಲಸ್ ಟು ವಿಭಾಗದಲ್ಲಿ ನೆಲ್ಲಿಹುದಿಕೇರಿಯ ದಾರುಸ್ಸಲಾಂ ಮದ್ರಸ ವಿದ್ಯಾರ್ಥಿನಿ ಅರ್ಷಾ ಜಸ್ಮೀನ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.