ಸಿದ್ದಾಪುರ, ಜೂ. 5 : ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ಕಲಾ ಸಂಘದ ವತಿಯಿಂದ ಕಾವೇರಿ ನದಿಯಲ್ಲಿನ ತ್ಯಾಜ್ಯವನ್ನು ತೆಗೆಯುವದರ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.

ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ಕಲಾ ಸಂಘ ಹಾಗೂ ಯುವ ಬ್ರಿಗೇಡ್‍ನ ಸದಸ್ಯರು ಕಾವೇರಿ ನದಿಯಲ್ಲಿದ್ದ ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳನ್ನು ಹೊರತೆಗೆದರು.

ಈ ಸಂದರ್ಭ ಸಂಘಟನೆಯ ಸಂಚಾಲಕ ಶರಣ್ ಪ್ರಕಾಶ್, ಪದ್ಮನಾಭ, ವಿನೋದ್, ಜಯ, ಸುಂದರ ಸೇರಿದಂತೆ ಇನ್ನಿತರರು ಇದ್ದರು.