ಸುಂಟಿಕೊಪ್ಪ, ಜೂ. 3: ಗ್ರಾಮೀಣ ಮಟ್ಟದ ಕ್ರೀಡಾಪಟುಗಳನ್ನು ಗುರುತಿಸಿ ಹೊರತರಬೇಕು ಎನ್ನುವ ದೃಷ್ಟಿಯಿಂದ ತನ್ನ ತಂದೆಯ ಹೆಸರಿನಲ್ಲಿ ಫುಟ್ ಬಾಲ್ ಪಂದ್ಯವನ್ನು ಆಯೋಜಿಸಿದ್ದು, ಮುಂದಿನ ವರ್ಷ ಈ ಪಂಂದ್ಯಾವಳಿಗೆ 25 ವರ್ಷ ತುಂಬಲಿದ್ದು. ಈ ನಿಟ್ಟಿನಲ್ಲಿ ವಿಶೇಷವಾಗಿ ರಾಜ್ಯವನ್ನು ಸುಂಟಿಕೊಪ್ಪದತ್ತ ಸೆಳೆಯುವ ವಿನೂತನ ರೀತಿಯ ಪಂದ್ಯಾವಳಿಯನ್ನು ಆಯೋಜಿಸುವ ಚಿಂತನೆ ಇದೆ ಎಂದು ಬೆಟ್ಟಗೇರಿ ಸಮೂಹ ಕಾಫಿ ತೋಟಗಳ ಮಾಲೀಕ ವಿನೋದ್ ಶಿವಪ್ಪ ತಿಳಿಸಿದರು.

ಬ್ಲೂ ಬಾಯ್ಸ್ ಯೂತ್ ಕ್ಲಬ್‍ನ ವತಿಯಿಂದ ಸಂಘದ 37ನೇ ವಾರ್ಷಿಕೋತ್ಸವ ಮತ್ತು ದಿ.ಡಿ.ಶಿವಪ್ಪ ಅವರ ಜ್ಞಾಪಕಾರ್ಥದ 24 ನೇ ವರ್ಷದ ರಾಜ್ಯ ಮಟ್ಟದ ‘ಗೋಲ್ಡ್ ಕಪ್’ ಫುಟ್‍ಬಾಲ್ ಟೂರ್ನಿಯ ಸಮಾರೋಪದಲ್ಲಿ ಅವರು ಮಾತನಾಡಿದರು. ಈ ಫುಟ್‍ಬಾಲ್ ಟೂರ್ನಿಯಿಂದ ಹಲವು ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗಿದೆ ಎಂದರು.

ಮಡಿಕೇರಿ ಉದÀ್ಯಮಿ ಮಿಟ್ಟು ಚಂಗಪ್ಪ ಮಾತನಾಡಿ, ಬೆಟ್ಟಗೇರಿಯ ಡಿ.ಶಿವಪ್ಪ ಅವರು ಫುಟ್‍ಬಾಲ್ ಮತ್ತು ಕ್ರಿಕೆಟ್ ಪ್ರೇಮಿಯಾಗಿದ್ದು, ತಮ್ಮೂರಿನಲ್ಲಿ ಫುಟ್‍ಬಾಲ್ ವಿಕಸನಕ್ಕೆ ಸಾಕಷ್ಟು ಕನಸು ಕಂಡಿದ್ದರು. ಹಾಗೆಯೇ ಈ ಪಂದ್ಯಾವಳಿಯಿಂದಾಗಿ ಸುಂಟಿಕೊಪ್ಪ ಕೂಡ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯದ ಪರಿಹಾರ ವೇದಿಕೆಯ ಆಧ್ಯಕ್ಷ ಎ.ಲೋಕೇಶ್ ಕುಮಾರ್ ಮಾತನಾಡಿ, ಈ ಪಂದ್ಯಾವಳಿಯಿಂದ ಈ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡೆ ಬೆಳವಣಿಗೆಗೆ ಸಹಕಾರಿಯಾಗಿದೆ.ಅನೇಕ ರಾಜ್ಯ ಮತ್ತು ರಾಷ್ಟ್ರಮಟ್ಟದ ಆಟಗಾರರು ಈ ಮೈದಾನದಲ್ಲಿ ತಮ್ಮ ಕ್ರೀಡಾ ಪ್ರತಿಭೆಯನ್ನು ತೋರಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಸೋಲು, ಗೆಲವು ಎಂಬ ಮನೋಬಾವನೆ ಬಿಟ್ಟು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಇದರಿಂದ ಪ್ರೀತಿ, ಸ್ನೇಹ ಮೂಡುತ್ತದೆ ಎಂದು ಹೇಳಿದರು. ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿದರು.

ವೇದಿಕೆಯಲ್ಲಿ ಬೆಟ್ಟಗೇರಿ ತೋಟದ ಮಾಲೀಕ ವಿಶಾಲ್ ಶಿವಪ್ಪ, ಜಿ.ಪಂ. ಮಾಜಿ ಸದಸ್ಯ ಪೆಮ್ಮಯ್ಯ, ದಾನಿಗಳಾದ ಎ.ಎಸ್.ರಾಮಣ್ಣ, ಅಣ್ಣಾ ಶರೀಫ್, ಮಾಜಿ. ಗ್ರಾ.ಪಂ.ಅಧ್ಯಕ್ಷ ಎಂ.ಎ.ಉಸ್ಮಾನ್, ಹಿರಿಯ ಆಟಗಾರÀ ಅದ್ರಂ, ಭಾರತೀಯ ಬಾಸ್ಕೆಟ್‍ಬಾಲ್ ಆಟಗಾರ್ತಿ ಪಟ್ಟೆಮನೆ ನವನೀತ, ಡಾ.ಶಶಿಕಾಂತ್ ರೈ, ಜಿಲ್ಲಾ ಫುಟ್ ಬಾಲ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಬಿ.ಸಿ.ದಿನೇಶ್. ಬ್ಲೂ ಬಾಯ್ಸ್ ಯುವಕ ಸಂಘದ ಅಧ್ಯಕ್ಷ ಆದಿಶೇಷ, ಮಾಜಿ ಅಧ್ಯಕ್ಷ ಮೋಣಪ್ಪ ಪೂಜಾರಿ ಆಲಿಕುಟ್ಟಿ, ಕಾರ್ಯದರ್ಶಿ ಬಿ.ಕೆ.ಪ್ರಶಾಂತ್, ಗ್ರಾ.ಪಂ.ಸದಸ್ಯೆ ಗಿರಿಜಾ ಉದಯಕುಮಾರ್ ಇತರರರು ಇದ್ದರು.