ಕುಶಾಲನಗರ, ಜೂ. 4: ವಯೋನಿವೃತ್ತಿ ಹೊಂದಿದ ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಕೆ.ವಿ. ಉದಯ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾಲೇಜು ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲರು, ಉಪನ್ಯಾಸ ಮತ್ತು ಸಿಬ್ಬಂದಿ ಉದಯ ದಂಪತಿಯನ್ನು ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು. ಉದಯ ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಶುಭ ಹಾರೈಸಿದರು.
ಉದಯ ಅವರು ಮಾತನಾಡಿ, ಕಾಲೇಜಿನಲ್ಲಿ ತಮ್ಮ ಸೇವೆ, ಎನ್ನೆಸ್ಸೆಸ್ ಅಧಿಕಾರಿಯಾಗಿ ನಿರ್ವಹಿಸಿದ ಕರ್ತವ್ಯದ ಬಗ್ಗೆ ಸ್ಮರಿಸಿಕೊಂಡರು.
ಈ ಸಂದರ್ಭ ಕಾಲೇಜು ಪ್ರಾಂಶುಪಾಲ ಎಚ್.ಕೆ. ಕೆಂಪೇಗೌಡ, ನಿವೃತ್ತ ಪ್ರಾಂಶುಪಾಲ ಎಚ್.ವಿ. ಶಿವಪ್ಪ, ಉಪನ್ಯಾಸಕರಾದ ಎಚ್.ಜೆ. ಕುಮಾರ್, ಸ್ಮಿತಾ, ಯತಿರಾಜ್, ಗಿರೀಶ್ ಇದ್ದರು.