ಗೋಣಿಕೊಪ್ಪಲು, ಜೂ. 3: ಗಡಿಭಾಗ ಕುಟ್ಟ ಗ್ರಾಮದ ಕೊಡವ ಸಮಾಜ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಅಧ್ಯಕ್ಷತೆಯಲ್ಲಿ ತಾ. 4 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ರೈತರ ಸಭೆ ನಡೆಯಲಿದೆ.
ಕೊಡಗಿನ ವಿವಿಧ ಭಾಗದಲ್ಲಿ ನಿರಂತರ ಆನೆ ಹಾವಳಿ, ವನ್ಯ ಜೀವಿಗಳ ಉಪಟಳ, ಇಲಾಖೆಯಿಂದ ರೈತರಿಗೆ ಬರಬೇಕಾದ ಪರಿಹಾರ ವಿತರಣೆಯಲ್ಲಿ ವಿಳಂಬ ಸೇರಿದಂತೆ ಇನ್ನಿತರ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ತಿಳಿಸಿದ್ದಾರೆ.