ಮಡಿಕೇರಿ, ಜೂ. 4: ಪವಿತ್ರ ರಂಜಾನ್ ಪ್ರಯುಕ್ತ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲನ್ನು ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲೆ ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಹಫೀಲ್ ಸಹದಿ ಯು.ಎ.ಇ ,ಒಮಾನ್, ಸೌದಿ ಅರೇಬಿಯ,ಕತರ್, ಕುವೈತ್ ಅರಬ್ ರಾಷ್ಟ್ರಗಳಲ್ಲಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕಾರ್ಯಾಚರಿಸುತ್ತಿದೆ ಎಂದರು.
ಈ ಸಂದರ್ಭ ಸಂಘಟನೆಯ ಸದಸ್ಯರಾದ ಇಸ್ಮಾಯಿಲ್, ಸಿದ್ದಿಖ್, ಆದಂ, ಅಬ್ದುರಹಮಾನ್, ಎಸ್.ಎಸ್.ಎಫ್ ಜಿಲ್ಲಾ ಕಾರ್ಯದರ್ಶಿ ಮುಸ್ತಫಾ, ರಫೀಕ್, ಹಂಸ, ಆದಂ, ಮೊಹಮ್ಮದ್ ರಫಿ ಹಾಗೂ ಮತ್ತಿತ್ತರರು ಇದ್ದರು.