ಮಡಿಕೇರಿ, ಜೂ. 3: ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ವಿಚಾರಣೆಗೆ ಬಾಕಿ ಇರುವದರಿಂದ ಸೂಕ್ತ ಸಮಯದಲ್ಲಿ ನ್ಯಾಯ ಒದಗಿಸುವ ಸಲುವಾಗಿ ವಾರದ ಎರಡು ದಿನಗಳಲ್ಲಿ ಅಂದರೆ ಸೋಮವಾರ ಮತ್ತು ಬುಧವಾರ ಅಪರಾಹ್ನ 3 ಗಂಟೆಗೆ ನ್ಯಾಯಾಲಯದ ಕಲಾಪಗಳನ್ನು ನಡೆಸಲಾಗುತ್ತಿದೆ.

ಹಾಗೆಯೇ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಲೇವಾರಿಗೆ ವರ್ಷ ಮೇಲ್ಪಟ್ಟ 127 ಪ್ರಕರಣಗಳು ಬಾಕಿ ಇದ್ದು, ಆ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ತಾ. 14, 15, 21 ಹಾಗೂ 22ರಂದು ಅಪರಾಹ್ನ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ. 127 ಪ್ರಕರಣಗಳ ಪಟ್ಟಿಯನ್ನು ಕೊಡಗು ಜಿಲ್ಲಾ ವೆಬ್‍ಸೈಟ್ hಣಣಠಿs://ಞoಜಚಿgu.ಟಿiಛಿ.iಟಿನಲ್ಲಿ ವಕೀಲರ ಮತ್ತು ಸಾರ್ವಜನಿಕರ ಮಾಹಿತಿಗಾಗಿ ಪ್ರಚುರ ಪಡಿಸಲಾಗಿದೆ.