ಮಡಿಕೇರಿ, ಜೂ. 4: ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಸಿಯೇಷನ್ ಹಾಗೂ ಇಮೇಜ್ ಅಂಡ್ ಮಲ್ಟಿಮೀಡಿಯಾ ಅಕಾಡೆಮಿ ಟ್ರಸ್ಟ್ ಇವರ ಸಹಯೋಗದೊಂದಿಗೆ ‘ಕಿರುಚಿತ್ರ ಸ್ಪರ್ಧೆ’ಯು ತಾ. 28, 29 ಮತ್ತು 30 ರಂದು ಬಿಐಇಸಿ, ನೆಲಮಂಗಲ ರಸ್ತೆ ಇಲ್ಲಿ ನಡೆಯುವ ‘ಫೋಟೋ ಟುಡೆ’ ಅಂತರ್ರಾಷ್ಟ್ರೀಯ ಛಾಯಾಗ್ರಹಣ ಸಂಬಂಧಿತ ವಸ್ತು ಪ್ರದರ್ಶನ ಸಂದರ್ಭದಲ್ಲಿ ಪ್ರದರ್ಶಿಸಿ ಸ್ಪರ್ಧೆಯಲ್ಲಿ ಆಯ್ಕೆಯಾದ ಅತ್ಯುತ್ತಮ ‘ಕಿರು ಚಿತ್ರಗಳಿಗೆ’ ಕ್ರಮವಾಗಿ 25 ಸಾವಿರ, 15 ಸಾವಿರ ಹಾಗೂ 10 ಸಾವಿರ ನಗದು ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಲಾಗುವದು. ದೇಶ ವಿದೇಶಗಳಲ್ಲಿ ಫೋಟೋ ಎಕ್ಸ್ಪೋ ಖ್ಯಾತಿಯ ಬೈಸೆಲ್ ಇಂಟರ್ಯಾಂಕ್ಷನ್ ಪ್ರೈ ಲಿ., ವತಿಯಿಂದ ಸ್ಪರ್ಧಿಸಿದ ಎಲ್ಲರಿಗೂ ಅರ್ಹತ ಪತ್ರ ನೀಡಿ ಗೌರವಿಸಲಾಗುವದು.
ಸ್ಪರ್ಧೆಯ ವಿಷಯ: ನೀರು ಅತ್ಯಮೂಲ್ಯ ‘ನೀರು ಉಳಿಸಿ’, ನಾನೇಕೆ ಮತದಾನ ಮಾಡಬೇಕು, ನಮ್ಮ ನಗರ, ಮದುವೆಯ ಭಾವನಾತ್ಮಕ ಸಂದರ್ಭ. ಕಿರುಚಿತ್ರ ಕಳುಹಿಸಲು ತಾ. 20 ಕೊನೆಯ ದಿನವಾಗಿದೆ. ನೋಂದಣಿಗಾಗಿ ಹಾಗೂ ಹೆಚ್ಚಿನ ವಿವರಗಳಿಗೆ ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಷಿಯೇಷನ್ ಪರವಾಗಿ ಎಸ್. ರಾಜಶೇಖರ್- 9448831288 ರಮೇಶ್, ಬಾಬು – 9845212903 ನ್ನು ಸಂಪರ್ಕಿಸಬಹುದು.