ಸುಂಟಿಕೊಪ್ಪ, 2: ಮೈಸೂರಿನ ಶ್ರೀ ಕೃಷ್ಣ ಧಾಮದ ರಜತೋತ್ಸವ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಉಡುಪಿ ಶ್ರೀ ಪೇಜಾವರ ಅದೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದ ಎಂ.ಎನ್.ಗಣೇಶ ಉಪಾದ್ಯಾಯ ಅವರ ಮನೆಗೆ ಭೇಟಿ ನೀಡಿದರು. ಸ್ವಾಮೀಜಿಯವರಿಗೆ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಈ ವೇಳೆ ಪ್ರತಿಕ್ರಿಯಿಸಿದ ಅವರು ಪ್ರಧಾನಮಂತ್ರಿ ನರೆಂದ್ರ ಮೋದಿ ಅವರನ್ನು ವಿರೋಧ ಪಕ್ಷ ಅದರ ಮಿತ್ರ ಪಕ್ಷಗಳು ಒಗ್ಗೂಡಿ ಸೋಲಿಸಲು ಶ್ರಮ ವಹಿಸಿದರೂ ಅದು ಫಲಕಾರಿಯಾಗಲಿಲ್ಲ. ರಾಜ್ಯದಲ್ಲಿ ಕೆಲವು ರಾಜಕಾರಣಿಗಳು ಹಿಂದೂ ಧರ್ಮದ ಮೇಲೆ ಅಪಪ್ರಚಾರ ಮಾಡಿ ಹೀಯಾಳಿಸುವದು ಸರಿಯಲ್ಲ; ಜಾತ್ಯತೀತ ನೆಲೆಗಟ್ಟಿನ ಮೇಲೆ ಕೆಲಸ ಮಾಡಿದ್ದರಿಂದ ಜಯ ಲಭಿಸಿದೆ. ಉಳಿದ ಪಕ್ಷÀಗಳು ಹಿಂದೂ ಧರ್ಮವನ್ನು ಹೀಯಾಳಿಸಿದರಿಂದ ಈ ದುರ್ಗತಿ ಬಂದಿದೆ, ಒಳ್ಳೆಯ ಅಭಿವೃದ್ಧಿ ಕಾರ್ಯಗಳು ಮಾಡಿದರೆ ಮುಂದಿನ ವರ್ಷಗಳಲ್ಲೂ ಮೋದಿ ಪ್ರದಾನಿಯಾಗುವದರಲ್ಲಿ ಸಂಶಯವಿಲ್ಲ ಎಂದರು. ರಾಜ್ಯದ ಬಗ್ಗೆ ಪ್ರಶ್ನೆ ಮಾಡಿÀದಾಗ ರಾಜ್ಯ ರಾಜಕಾರಣದ ಬಗ್ಗೆ ಏನನ್ನು ಮಾತನಾಡಲು ಬಯಸುವದಿಲ್ಲ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. ಈ ಸಂದರ್ಭ ಮಠದಿಂದ ಅವರ ಶಿಷ್ಯರೂ ಸೇರಿದಂತೆ 20 ಮಂದಿ ಎಂ.ಎನ್.ಗಣೇಶ ಉಪಾದ್ಯಾಯ ಅವರ ಕುಟುಂಬದವರಿಗೆ ಆಶೀರ್ವಚನ ನೀಡಿ ಫಲಾಹಾರ ಸೇವಿಸಿ ಮೈಸೂರಿಗೆ ಪ್ರಯಾಣಿಸಿದರು.