ಗೋಣಿಕೊಪ್ಪ ವರದಿ, ಜೂ. 1: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಇಲ್ಲಿನ ಕಾವೇರಿ ಕಾಲೇಜು ಆವರಣದಲ್ಲಿ ತಾ. 8 ಹಾಗೂ 9 ರಂದು ನಡೆಯಲಿರುವ ಬೊಳ್ಳಿನಮ್ಮೆ ಪ್ರಚಾರ ಕಾರ್ಯಕ್ರಮವಾಗಿ ತಾ. 2 ರಿಂದ 5 ರವರೆಗೆ ಜಿಲ್ಲೆಯ ವಿವಿಧ ಗ್ರಾಮಗಳ ಮೂಲಕ ಸಂಚರಿಸಲಿರುವ ರಥಕ್ಕೆ ತಾ. 2 ರಂದು (ಇಂದು) ಬೆಳಿಗ್ಗೆ 9 ಗಂಟೆಗೆ ಇಲ್ಲಿನ ಉಮಾಮಹೇಶ್ವರಿ ದೇವಸ್ಥಾನದ ಎದುರು ಚಾಲನೆ ನೀಡಲಾಗುವದು.

ರಥವು ಗೋಣಿಕೊಪ್ಪಲುವಿನಿಂದ ಪೊನ್ನಂಪೇಟೆ, ಹುದಿಕೇರಿ, ಟಿ. ಶೆಟ್ಟಿಗೇರಿ, ಬಿರುನಾಣಿ, ಶ್ರೀಮಂಗಲ, ಕುಟ್ಟ ಹಾಗೂ ಕಾನೂರು ಗ್ರಾಮಗಳಿಗೆ ತೆರಳಿ ಕಾರ್ಯಕ್ರಮವನ್ನು ಪ್ರಚಾರಪಡಿಸಲಿದೆ.

ಸೋಮವಾರ ವೀರಾಜಪೇಟೆ, ಚೈಯ್ಯಂಡಾಣೆ, ನಾಪೋಕ್ಲು, ಚೇರಂಬಾಣೆ, ಮಡಿಕೇರಿ, ಮಕ್ಕಂದೂರು, ಮಾದಾಪುರ, ಸೂರ್ಲಬಿ, ಮಂಗಳವಾರದಂದು ಮೂರ್ನಾಡು, ವೀರಾಜಪೇಟೆ. ಅಮ್ಮತ್ತಿ, ಸುಂಟಿಕೊಪ್ಪ, ಕುಶಾಲನಗರ, ಸೋಮವಾರಪೇಟೆ, ಬುಧವಾರದಂದು ಕಾಕೋಟುಪರಂಬು, ಬಿಟ್ಟಂಗಾಲ, ಬಿ. ಶೆಟ್ಟಿಗೇರಿ, ಕಿರುಗೂರು, ಮಾಯಮುಡಿ, ಬಾಳೆಲೆಗೆ ತೆರಳಿ ಗೋಣಿಕೊಪ್ಪಕ್ಕೆ ಬಂದು ಸೇರಲಿದೆ ಎಂದು ಕೊಡವ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಮಾಹಿತಿ ನೀಡಿದ್ದಾರೆ.